ಹಾಲು ಹಲವು ಪೋಷಕಾಂಶಗಳ ಆಗರ. ಒಂದು ಲೋಟ ಹಾಲನ್ನು ನಿತ್ಯ ಸೇವಿಸುವುದರಿಂದ ನಿದ್ರಾಹೀನತೆಯಿಂದ ಆರಂಭಿಸಿ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ ಹಾಲು ಕುಡಿದಾಕ್ಷಣ ಇವುಗಳನ್ನು ಸೇವಿಸಬಾರದು ಎಂಬುದು ನಿಮಗೆ ತಿಳಿದಿದೆಯೇ?
ಹಾಲು ಕುಡಿದ ತಕ್ಷಣ ಯಾವುದೇ ಹುಳಿಯಾದ ಆಹಾರ ಸೇವಿಸುವುದು ಒಳ್ಳೆಯದಲ್ಲ. ಸಲಾಡ್, ಮೊಸರು ಅಥವಾ ನಿಂಬೆಹಣ್ಣಿನ ಜ್ಯೂಸ್ ಅನ್ನು ಹಾಲು ಕುಡಿಯುವ ಮುನ್ನ ಅಥವಾ ಹಾಲು ಕುಡಿದಾದ ತಕ್ಷಣ ಸೇವಿಸದಿರಿ. ಇದರಿಂದ ನಿಮ್ಮ ಹೊಟ್ಟೆ ಹಾಳಾಗುವ ಸಾಧ್ಯತೆ ಇದೆ.
ಹಾಲು ಮತ್ತು ಮೀನನ್ನು ಜೊತೆಯಾಗಿ ಸೇವಿಸುವುದು ಕೂಡಾ ಒಳ್ಳೆಯದಲ್ಲ. ಮೀನು ಊಟ ಸೇವಿಸಿ, ಅರ್ಧ ಗಂಟೆ ಬಳಿಕ ಮಲಗುವ ಮುನ್ನ ಹಾಲು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.
ಹಲಸಿನಕಾಯಿ, ಉದ್ದಿನಬೇಳೆ, ಗೆಣಸು, ಆಲೂಗಡ್ಡೆ ಜೊತೆಗೆ ಹಾಲು ಕುಡಿಯುವುದು ಕೂಡಾ ಒಳ್ಳೆಯದಲ್ಲ. ಇವುಗಳ ಮಧ್ಯೆ ಕನಿಷ್ಠ 2 ಗಂಟೆಗಳ ಗ್ಯಾಪ್ ಇರಲಿ. ಕಲ್ಲಂಗಡಿ ಹಣ್ಣನ್ನೂ ಹಾಲಿನ ಜೊತೆ ಸೇವಿಸುವುದು ಒಳ್ಳೆಯದಲ್ಲ.