ಮನೆಯಲ್ಲಿ ಸಿಹಿ ವಸ್ತುಗಳನ್ನು ಚೆಲ್ಲಿದಾಗ ಇರುವೆಗಳು ಬಂದು ಮುತ್ತಿಕೊಳ್ಳುತ್ತದೆ. ಇದರಲ್ಲಿ ಕೆಲವು ಇರುವೆ ಕಚ್ಚುತ್ತವೆ. ಇಂತಹ ಕಚ್ಚುವ ಇರುವೆಗಳಿಂದ ಮುಕ್ತಿ ಹೊಂದಲು ಈ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ.
*ಇರುವೆಗಳು ಸಿಟ್ರಸ್ ಹಣ್ಣುಗಳ ವಾಸನೆಗೆ ದೂರ ಓಡುತ್ತವೆ. ಹಾಗಾಗಿ ಕಿತ್ತಳೆ, ನಿಂಬೆ ಮುಂತಾದ ಸಿಟ್ರಸ್ ಹಣ್ಣುಗಳ ಸಿಪ್ಪೆಯನ್ನು ಪುಡಿ ಮಾಡಿ ನೀರಿಗೆ ಮಿಕ್ಸ್ ಮಾಡಿ ಮನೆಯಲ್ಲಿ ಸಿಂಪಡಿಸಿ.
*ಇರುವೆಗಳು ಪುದೀನಾ ವಾಸನೆಗೆ ಸಾಯುತ್ತವೆ. ಹಾಗಾಗಿ ಪುದೀನಾ ಸೊಪ್ಪನ್ನು ಮನೆಯ ಮೂಲೆಗಳಲ್ಲಿ ಇಡಿ. ಇಲ್ಲವಾದರೆ ಪೆಪ್ಪರ್ ಮೆಂಟ್ ಆಯಿಲ್ ನ್ನು ಬಳಸಿ.
*ದಾಲ್ಚಿನ್ನಿಯ ವಾಸನೆಗೆ ಇರುವೆ ದೂರ ಹೋಗುತ್ತವೆ. ಹಾಗಾಗಿ ದಾಲ್ಚಿನ್ನಿ ಪುಡಿ ಮಾಡಿ ನೀರಿಗೆ ಮಿಕ್ಸ್ ಮಾಡಿ ಮನೆಯಲ್ಲಿ ಸಿಂಪಡಿಸಿ.