alex Certify ಹೊಳೆಯುವ ತ್ವಚೆ ನಿಮ್ಮದಾಗಲು ಅನುಸರಿಸಿ ಈ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಳೆಯುವ ತ್ವಚೆ ನಿಮ್ಮದಾಗಲು ಅನುಸರಿಸಿ ಈ ವಿಧಾನ

ಹೊರಗಡೆ ಕೆಲಸಕ್ಕೆ ಹೋಗುವವರಿಗೆ ಸಮಯವಿರದ ಕಾರಣ ತ್ವಚೆಯ ಆರೈಕೆ ಸರಿಯಾಗಿ ಮಾಡಲು ಆಗುವುದಿಲ್ಲ. ಇದರಿಂದ ಅವರ ಚರ್ಮ ಕಳೆಗುಂದಿರುತ್ತದೆ. ಹಾಗಾಗಿ ಭಾನುವಾರ ರಜೆ ಇರುವುದರಿಂದ ಈ ರೀತಿಯಲ್ಲಿ ಚರ್ಮದ ಆರೈಕೆ ಮಾಡಿದರೆ ನಿಮ್ಮ ತ್ವಚೆ ಆರೋಗ್ಯವಾಗಿ ಕಾಂತಿಯುತವಾಗಿರುತ್ತದೆ.

*ಮೊದಲನೇಯದಾಗಿ ತ್ವಚೆಯನ್ನು ಸ್ವಚ್ಛಗೊಳಿಸಿ : ಅದಕ್ಕಾಗಿ ಕೆಲವು ಹನಿ ಬಾದಾಮಿ ಎಣ್ಣೆಯನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿ 4 ನಿಮಿಷ ಮಸಾಜ್ ಮಾಡಿ. ಬಳಿಕ ಹತ್ತಿಯ ಸಹಾಯದಿಂದ ಸ್ವಚ್ಛಗೊಳಿಸಿ.

*ಎರಡನೇಯದಾಗಿ ಫೇಸ್ ವಾಶ್ ಮಾಡಿ : ಮುಖಕ್ಕೆ ಜೇನುತುಪ್ಪ ಹಚ್ಚಿ 10 ನಿಮಿಷ ಬಿಟ್ಟು ಮುಖವನ್ನು ವಾಶ್ ಮಾಡಿ.

*ಮೂರನೇಯದಾಗಿ ಮುಖಕ್ಕೆ ಸ್ಟೀಮ್ ನೀಡಿ : ಬಿಸಿ ನೀರಿಗೆ 2 ಹನಿ ಲ್ಯಾವೆಂಡರ್ ಎಸೆನ್ಷಿಯಲ್ ಆಯಿಲ್ ಸೇರಿಸಿ 10 ನಿಮಿಷಗಳ ಕಾಲ ಸ್ಟೀಮ್ ತೆಗೆದುಕೊಳ್ಳಿ.

*ನಾಲ್ಕನೇಯದಾಗಿ ಫೇಸ್ ಸ್ಕ್ರಬಿಂಗ್ : ಬಾದಾಮಿ ಎಣ್ಣೆ ಸ್ವಲ್ಪ ಸಕ್ಕರೆ, ಹಾಲಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 3 ನಿಮಿಷಗಳ ಕಾಲ ಸ್ಕ್ರಬ್ ಮಾಡಿ 5 ನಿಮಿಷ ಬಿಟ್ಟು ವಾಶ್ ಮಾಡಿ.

*ಐದನೇಯದಾಗಿ ಫೇಸ್ ಪ್ಯಾಕ್ ಹಚ್ಚಿ: ಪುದೀನ ಪುಡಿ, ರೋಸ್ ವಾಟರ್, ಅರಶಿನ, ಜೇನುತುಪ್ಪ, ಕಡಲೆಹಿಟ್ಟು ಬೆರೆಸಿ ಪೇಸ್ಟ್ ತಯಾರಿಸಿ ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ವಾಶ್ ಮಾಡಿ.

*ಆರನೇಯದಾಗಿ ಮಾಯಿಶ್ಚರೈಸರ್ ಹಚ್ಚಿ : ಅಲೊವೆರಾ ಜೆಲ್ ನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...