ಕೆಲವೊಮ್ಮೆ ಅಡುಗೆ ಮಾಡುವಾಗ ಪಾತ್ರೆ ತಳ ಹಿಡಿಯುತ್ತವೆ, ಸೀದು ಹೋದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಕಷ್ಟದ ಕೆಲಸ. ಇದನ್ನು ಸರಿಯಾಗಿ ಕ್ಲೀನ್ ಮಾಡದಿದ್ದರೆ ಅದರಿಂದ ತಯಾರಿಸಿದ ಅಡುಗೆ ರುಚಿಕರವಾಗಿರುವುದಿಲ್ಲ. ಹಾಗಾಗಿ ಈ ಸುಟ್ಟ ಪಾತ್ರೆಗಳನ್ನು ಕ್ಲೀನ್ ಮಾಡಲು ಈ ವಿಧಾನಗಳನ್ನು ಅನುಸರಿಸಿ.
*ಸುಟ್ಟ ಪಾತ್ರೆಗಳನ್ನು ಸ್ವಚ್ಚಗೊಳಿಸಲು ಉಪ್ಪನ್ನು ಬಳಸಿ. ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಪಾತ್ರೆಯ ಮೇಲೆ ಸ್ಕ್ರಬ್ ಮಾಡಿ. ಇದರಿಂದ ಕಲೆ ಸುಲಭವಾಗಿ ನಿವಾರಣೆಯಾಗುತ್ತದೆ.
*ಅಡುಗೆ ಸೋಡಾದ ಪೇಸ್ಟ್ ಗಳನ್ನು ಸುಟ್ಟ ಪಾತ್ರೆಗೆ ಹಾಕಿ 15 ನಿಮಿಷ ನೆನೆಸಿಡಿ. ಬಳಿಕ ಅದನ್ನು ಸೋಪ್ ಬಳಸಿ ತೊಳೆಯಿರಿ.
*ಟೊಮೆಟೊ ಸಾಸ್ ನ್ನು ಸುಟ್ಟ ಪಾತ್ರೆಗಳ ಮೇಲೆ ಹಚ್ಚಿ ರಾತ್ರಿಯಿಡಿ ಇಟ್ಟು ಬೆಳಿಗ್ಗೆ ಸ್ಕ್ರಬ್ ಬಳಸಿ ವಾಶ್ ಮಾಡಿ.
*ಸುಟ್ಟ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಸಿಟ್ರಸ್ ಅಂಶ ಸಹಕಾರಿಯಾಗಿದೆ. ಹಾಗಾಗಿ ನಿಂಬೆ ಹಣ್ಣನ್ನು ಬಳಸಿ ಪಾತ್ರೆಗಳ ಮೇಲೆ ಸ್ಕ್ರಬ್ ಮಾಡಿ . ಇದರಿಂದ ಕಲೆಗಳು ಬೇಗನೆ ನಿವಾರಣೆಯಾಗುತ್ತದೆ.