ಆಭರಣಗಳು ಸದಾಕಾಲ ಹೊಳಪಿನಿಂದ ಕೂಡಿರಬೇಕು. ಆಗ ಮಾತ್ರ ಸೌಂದರ್ಯ ಹೊರಸೂಸುತ್ತವೆ. ಆಭರಣ ಕಾಂತಿಹೀನಗೊಂಡರೆ ಧರಿಸಲು ಆಸಕ್ತಿ ಇರದು. ಹಾಗಾಗಿ ಆಭರಣಗಳ ಸೌಂದರ್ಯವನ್ನು ರಕ್ಷಿಸುವುದು ಹೇಗೆ?
ಕೆಲವು ಆಭರಣಗಳು ವಿಶಿಷ್ಟ ಹವಾಮಾನಕ್ಕೆ ಕಳೆಗುಂದುತ್ತವೆ.
ಮುಖ್ಯವಾದ ವಿಷಯವೆಂದರೆ….
* ಯಾವುದೇ ಆಭರಣ ಧರಿಸಿ ಮಲಗಬಾರದು. ಆಭರಣಗಳನ್ನು ಹತ್ತಿಯಿಂದ ಸ್ವಚ್ಛಗೊಳಿಸಬೇಕು. ಸ್ವಚ್ಛಗೊಳಿಸಿದ ಆಭರಣಗಳನ್ನು ಹಾಗೆಯೇ ತೆಗೆದಿಡದೆ ಸುರಕ್ಷಿತ ಪೆಟ್ಟಿಗೆಯಲ್ಲಿಡಬೇಕು.
* ಆಭರಣ ಧರಿಸಿದ ಜಾಗದ ಬಳಿ ಸೌಂದರ್ಯ ಪ್ರಸಾಧನ ಇಲ್ಲವೇ ಸುಗಂಧ ದ್ರವ್ಯದ ನೇರ ಬಳಕೆ ಆಗದಂತೆ ನೋಡಿಕೊಳ್ಳಬೇಕು.
* ಕಬ್ಬಿಣ ಅಂಶ ಹೊಂದಿರುವ ಪಾಲಕ್, ಮೆಂತ್ಯ ಮುಂತಾದ ಸೊಪ್ಪುಗಳನ್ನು ಕುದಿಸಿ. ಉಳಿದ ನೀರು ತಂಪಾದ ಬಳಿಕ ಅದರಲ್ಲಿ ಸ್ವಲ್ಪ ಹೊತ್ತು ಆಭರಣ ಹಾಕಿ. ನಂತರ ಬ್ರಷ್ ನಿಂದ ಉಜ್ಜಿದರೆ ಆಭರಣ ಮತ್ತೆ ಮೊದಲಿನ ಹೊಳಪು ಪಡೆಯುತ್ತದೆ.
* ಹಳೆಯ ಟೂತ್ ಬ್ರಷ್ ಮೇಲೆ ಸ್ವಲ್ಪ ಪೇಸ್ಟ್ ಹಾಕಿಕೊಂಡು ಧೂಳು ಸೇರಿಕೊಂಡ ಆಭರಣದ ಮೇಲೆ ತಿಕ್ಕಿ.
* ಆಲೂಗಡ್ಡೆ ಹೋಳು ಅಥವಾ ಆಲೂಗಡ್ಡೆ ಕುದಿಸಿದ ನೀರಿನಿಂದ ಕೂಡ ಆಭರಣಗಳನ್ನು ಸ್ವಚ್ಛ ಮಾಡಬಹುದು.
* ಸಕ್ಕರೆ ಬೆರೆಸಿದ ನೀರಿನಲ್ಲಿ ಆಭರಣಗಳನ್ನು ಸ್ವಚ್ಛಗೊಳಿಸುವುದರಿಂದಲೂ ಹೊಳಪು ತರಬಹುದು.
* ಚಿನ್ನದ ಚೈನ್ ನಲ್ಲಿ ಗಂಟು ಬಿದ್ದಿದ್ದರೆ, ಆ ಜಾಗದಲ್ಲಿ ಪೌಡರ್ ಹಾಕಿ. ಗಂಟು ಬಿಚ್ಚಲು ಅನುಕೂಲವಾಗುತ್ತದೆ.