ಆಹಾರದ ರುಚಿ ಹೆಚ್ಚಿಸುವಲ್ಲಿ ಹಸಿ ಮೆಣಸಿನ ಪಾತ್ರ ಬಹಳ ಮುಖ್ಯ. ಕೆಲವೊಂದು ಖಾರದ ಆಹಾರಗಳಿಗೆ ಹಸಿಮೆಣಸು ಬೇಕೇಬೇಕು.
ಹಸಿಮೆಣಸನ್ನು ಮನೆಯಲ್ಲಿ ಬಹಳ ದಿನ ಇಡುವುದು ಕಷ್ಟದ ಕೆಲಸ. ಬಹು ಬೇಗ ಮೆಣಸು ಕೊಳೆಯಲು ಶುರುವಾಗುತ್ತದೆ. ಅನೇಕ ದಿನ ಹಸಿಮೆಣಸನ್ನು ತಾಜಾ ಇಡುವುದು ಹೇಗೆ ಎಂಬ ಟಿಪ್ಸ್ ಇಲ್ಲಿದೆ.
ಮೊದಲು ಹಸಿಮೆಣಸನ್ನು ಚೆನ್ನಾಗಿ ತೊಳೆಯಿರಿ. ನಂತ್ರ ಬಟ್ಟೆಯಲ್ಲಿ ಮೆಣಸಿನ ಮೇಲಿರುವ ನೀರನ್ನು ಸ್ವಚ್ಛಗೊಳಿಸಿ. ಮೆಣಸಿನ ಕಾಯಿಯ ತೊಟ್ಟನ್ನು ಬೇರ್ಪಡಿಸಿ, ಮೆಣಸನ್ನು ಜಿಪ್ ಇರುವ ಬ್ಯಾಗ್ ನಲ್ಲಿ ಹಾಕಿಡಿ. ಬ್ಯಾಗನ್ನು ಬೆಳಕಿಗೆ ತೆರೆದಿಡಿ.
ಅನೇಕ ದಿನಗಳ ಕಾಲ ಮೆಣಸನ್ನು ಇಡಬಯಸಿದ್ದರೆ ಹಾಳಾಗಿರುವ ಮೆಣಸನ್ನು ತಾಜಾ ಇರುವ ಮೆಣಸಿನಿಂದ ಪ್ರತ್ಯೇಕಗೊಳಿಸಿ. ಇಲ್ಲವಾದ್ರೆ ಉಳಿದ ಮೆಣಸಿನ ಕಾಯಿಗಳು ಹಾಳಾಗುತ್ತವೆ.
ತೊಟ್ಟು ತೆಗೆದ ಮೆಣಸಿನ ಕಾಯಿಯನ್ನು ಮಿಕ್ಸರ್ ಗೆ ಹಾಕಿ ರುಬ್ಬಿಕೊಳ್ಳಿ. ನಂತ್ರ ಮಿಶ್ರಣಕ್ಕೆ ಸ್ವಲ್ಪ ಉಪ್ಪು ಹಾಕಿ ಫ್ರಿಡ್ಜ್ ನಲ್ಲಿಡಿ. ಅಗತ್ಯ ಬಿದ್ದಾಗ ಇದನ್ನು ಬಳಸಿ.
ಇನ್ನು ಕೆಂಪು ಮೆಣಸಿನ ರಕ್ಷಣೆ ಮಾಡುವುದು ಸುಲಭ. ಕೆಂಪು ಮೆಣಸಿನ ಕಾಯಿ ಡಬ್ಬಕ್ಕೆ ಚಿಟಕಿ ಹಿಂಗು ಹಾಕಿಡಿ. ಅನೇಕ ದಿನಗಳ ಕಾಲ ಕೆಂಪು ಮೆಣಸು ಹಾಳಾಗುವುದಿಲ್ಲ.