alex Certify ಉಸಿರಿನ ದುರ್ವಾಸನೆ ಹೋಗಲಾಡಿಸಲು ಈ ಟಿಪ್ಸ್‌ ಅನುಸರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಸಿರಿನ ದುರ್ವಾಸನೆ ಹೋಗಲಾಡಿಸಲು ಈ ಟಿಪ್ಸ್‌ ಅನುಸರಿಸಿ

Powerful Antioxidant You Can Eat, Drink or Apply to Your Skin - EcoWatch

ಬಾಯಿ ಬಿಟ್ಟರೆ ಸಾಕು, ಜನ ಮಾರು ದೂರ ಓಡ್ತಾರೆ. ಕೆಲವರ ಬಾಯಿಯಿಂದ ಬರುವ ದುರ್ವಾಸನೆಯೇ ಇದಕ್ಕೆ ಕಾರಣ. ಇದನ್ನು ಹೋಗಲಾಡಿಸಲು ಮನೆ ಮದ್ದು ಇಲ್ಲಿದೆ.

ದಾಲ್ಚಿನಿ : ದಾಲ್ಚಿನಿಯಲ್ಲಿ ಬ್ಯಾಕ್ಟೀರಿಯ ನಿರೋಧಕ ಗುಣ ಇದೆ. ಇದು ಉಸಿರಿನ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಇದನ್ನು ಹಾಗೆಯೇ ತಿನ್ನಬಹುದು. ಇಲ್ಲವೇ ಚಹಾದಲ್ಲಿ ಹಾಕಿ ಕುಡಿಯಬಹುದು. ಬಿಸಿ ನೀರಿಗೆ ಹಾಕಿಯೂ ಸೇವಿಸಬಹುದು.

ಸೋಂಪು : ಸೋಂಪು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಊಟದ ನಂತರ ಇದನ್ನು ಸೇವಿಸುವುದರಿಂದ ಜೀರ್ಣ ಕ್ರಿಯೆ ಸುಲಭವಾಗುತ್ತದೆ. ಕೆಟ್ಟ ಉಸಿರಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಸಾಯಿಸುವುದಲ್ಲದೇ, ಗ್ಯಾಸ್ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

ಪುದೀನಾ : ಮೌತ್ ಪ್ರೆಶನರ್ ಗಳಲ್ಲಿ ಪುದೀನಾ ಬಳಸುತ್ತಾರೆ. ಅದು ತಂಪನೆ ಅನುಭವ ನೀಡುತ್ತದೆ. ಅದರ ಚಹಾ ಕುಡಿಯುವುದರಿಂದ ಅಥವಾ ಹಾಗೇ ಪುದಿನಾ ತಿನ್ನುವುದರಿಂದ ದುರ್ವಾಸನೆ ಹೋಗಲಾಡಿಸಬಹುದು.

ಏಲಕ್ಕಿ : ಇದರ ಕಾಳುಗಳನ್ನು ಬಾಯಲ್ಲಿ ಹಾಕಿ ಜಗಿಯುಬೇಕು. ಊಟದ ನಂತರ ಏಲಕ್ಕಿ ಚಹಾ ಕುಡಿಯಬಹುದು.

ಸಾಸಿವೆ ಎಣ್ಣೆ : ಒಂದು ಚಮಚ ಸಾಸಿವೆ ಎಣ್ಣೆಯನ್ನು ಬಾಯಲ್ಲಿ 30 ಸೆಕೆಂಡ್ ಇಟ್ಟುಕೊಂಡು ನಂತರ ಉಗಿಯಿರಿ.

ಗ್ರೀನ್ ಟೀ : ನಿಮ್ಮ ಉಸಿರನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರತಿದಿನ ಒಂದು ಕಪ್ ಗ್ರೀನ್ ಟೀ ಸೇವಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...