alex Certify ಗರ್ಭಪಾತದ ಬಳಿಕ ಮತ್ತೆ ಸುಲಭವಾಗಿ ಗರ್ಭ ಧರಿಸಲು ಫಾಲೋ ಮಾಡಿ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಪಾತದ ಬಳಿಕ ಮತ್ತೆ ಸುಲಭವಾಗಿ ಗರ್ಭ ಧರಿಸಲು ಫಾಲೋ ಮಾಡಿ ಈ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ನಮ್ಮ ಕೆಟ್ಟ ಆಹಾರ, ಜೀವನಶೈಲಿಯಿಂದ ಮಹಿಳೆಯರಲ್ಲಿ ಗರ್ಭಪಾತದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಕೆಲವು ಮಹಿಳೆಯರು ಗರ್ಭಪಾತವಾದರೆ ಮತ್ತೆ ಗರ್ಭಧರಿಸುವುದು ತುಂಬಾ ಕಷ್ಟ ಎಂಬ ಚಿಂತೆಗೆ ಒಳಗಾಗುತ್ತಾರೆ. ಅಂತವರು ಬಹಳ ಬೇಗ ಸುಲಭವಾಗಿ ಮತ್ತೆ ಗರ್ಭಧರಿಸಲು ಈ ಟಿಪ್ಸ್ ನ್ನು ಫಾಲೋ ಮಾಡಿ.

*ಮಹಿಳೆಯರು ಆರೋಗ್ಯಕರವಾದ ದೇಹ ರಚನೆಯನ್ನು ಹೊಂದಿದ್ದರೆ ಬಹಳ ಸುಲಭವಾಗಿ ಗರ್ಭಧರಿಸಬಹುದು. ಹಾಗಾಗಿ ಅವರು ದಿನಕ್ಕೆ 8-10 ಗ್ಲಾಸ್ ನೀರನ್ನು ಸೇವಿಸಬೇಕು.

*ಮಹಿಳೆಯರು ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸಬೇಕು. ತರಕಾರಿ, ಹಣ್ಣುಗಳು, ಸೊಪ್ಪುಗಳು, ಧಾನ್ಯಗಳು ಮುಂತಾದ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಿದರೆ ಮಹಿಳೆಯರು ಉತ್ತಮ ಆರೋಗ್ಯ ಹೊಂದುವುದರ ಜೊತೆಗೆ ಆರೋಗ್ಯಕರವಾದ ಮಗುವನ್ನು ಕೂಡ ಪಡೆಯಬಹುದು.

*ಪ್ರತಿದಿನ ವ್ಯಾಯಾಮ ಮಾಡಿ. ವಾಕಿಂಗ್, ಸ್ವಿಮಿಂಗ್, ಯೋಗ, ಲಘು ಏರೋಬಿಕ್ಸ್ ಮುಂತಾದವುಗಳನ್ನು ಪ್ರತಿದಿನ ಅಭ್ಯಾಸ ಮಾಡಿ. ಇದರಿಂದ ನೀವು ಉತ್ತಮವಾದ ಫಲವತ್ತತೆಯನ್ನು ಪಡೆಯಬಹುದು.

*ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಉತ್ತಮವಾಗಿಡಿ. ಚಿಂತೆ, ಆತಂಕ, ಒತ್ತಡವನ್ನು ದೂರಮಾಡಿ, ಇವು ಆರೋಗ್ಯವನ್ನು ಹಾಳು ಮಾಡುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...