alex Certify ಸುಂದರ ಉಗುರಿಗೆ ಫಾಲೋ ಮಾಡಿ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಂದರ ಉಗುರಿಗೆ ಫಾಲೋ ಮಾಡಿ ಈ ಟಿಪ್ಸ್

ಸುಂದರವಾದ, ಉದ್ದ ಕೂದಲು ಮಾತ್ರವಲ್ಲ ಆಕರ್ಷಕ ಉಗುರು ಇರಬೇಕೆಂದು ಹುಡುಗಿಯರು ಬಯಸ್ತಾರೆ. ಉದ್ದ ಉಗುರಿಗೆ ಸುಂದರ ನೇಲ್ ಪಾಲಿಶ್ ಹಚ್ಚಿಕೊಳ್ಳುವುದನ್ನು ಹುಡುಗಿಯರು ಇಷ್ಟಪಡ್ತಾರೆ. ಆದ್ರೆ ಕೆಲವರ ಉಗುರು ಉದ್ದವಾಗಿ ಬೆಳೆಯುವುದಿಲ್ಲ. ಉಗುರಿನ ಸೌಂದರ್ಯಕ್ಕೆ ಕೆಲ ಆರೈಕೆಯ ಅಗತ್ಯವಿದೆ.

ಉಗುರು ಕತ್ತರಿಸುವುದು : ಆಗಾಗ ಉಗುರನ್ನು ಕತ್ತರಿಸುತ್ತಿರಬೇಕು. ಅಡ್ಡಾದಿಡ್ಡಿ ಬೆಳೆದ ಉಗುರುಗಳು, ಕೈ ಸೌಂದರ್ಯವನ್ನು ಹಾಳು ಮಾಡುತ್ತವೆ. 15 ದಿನಕ್ಕೆ ಒಮ್ಮೆಯಾದ್ರೂ ಉಗುರನ್ನು ಕತ್ತರಿಸಿ ಅದಕ್ಕೊಂದು ಆಕಾರ ನೀಡಬೇಕು.

ಮೆನಿಕ್ಯೂರ್ : ಕೈ ಹಾಗೂ ಉಗುರಿನ ಸೌಂದರ್ಯ ಬಯಸುವವರು ಮೆನಿಕ್ಯೂರ್ ಮಾಡುವ ಅಗತ್ಯವಿದೆ. ಇದ್ರಿಂದ ಉಗುರಿನ ಸುತ್ತಲಿರುವ ಡೆಡ್ ಸ್ಕಿನ್ ಹೋಗುತ್ತದೆ.

ಕೈ ಸ್ವಚ್ಛತೆ : ಉಗುರಿನ ಸೌಂದರ್ಯ ಬಯಸುವವರು ಆಗಾಗ ಕೈಗಳನ್ನು ಸ್ವಚ್ಛಗೊಳಿಸಬೇಕು. ಇದಕ್ಕೆ ಉಗುರ ಬೆಚ್ಚಗಿನ ನೀರು ಬಳಸಬೇಕು.

ಪ್ರತಿನಿತ್ಯದ ಆಹಾರ : ಆಹಾರದಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಉಗುರುಗಳು ಹೆಚ್ಚಾಗಿ ಮುರಿಯುತ್ತವೆ. ದೈನಂದಿನ ಆಹಾರದಲ್ಲಿ ಹಸಿರು  ತರಕಾರಿಗಳು, ತಾಜಾ ಹಣ್ಣುಗಳು, ಬೇಯಿಸಿದ ಮೊಟ್ಟೆಗಳು, ಓಟ್ ಮೀಲ್, ಒಣ ಹಣ್ಣುಗಳು ಇತ್ಯಾದಿಗಳನ್ನು ಸೇರಿಸಿ.

ಉಗುರನ್ನು ಉದ್ದವಾಗಿ ಬೆಳೆಸಲು ಬಯಸುವವರು ಉಗುರಿಗೆ ತೈಲದ ಮಸಾಜ್ ಮಾಡಬೇಕು. ತೆಂಗಿನ ಎಣ್ಣೆ, ಆಲಿವ್, ಬಾದಾಮಿ ಇತ್ಯಾದಿಗಳನ್ನು ಸ್ವಲ್ಪ ಬಿಸಿ ಮಾಡಿ ನಂತ್ರ ಉಗುರಗಳಿಗೆ ಹಚ್ಚಿ, 5-10 ನಿಮಿಷ ಮಸಾಜ್ ಮಾಡಬೇಕು. ಇದು ಉಗುರುಗಳನ್ನು ಬಲಪಡಿಸುತ್ತದೆ.

ಉಗುರು ಬೆಳವಣಿಗೆಗೆ ಬೆಳ್ಳುಳ್ಳಿಯನ್ನೂ ಬಳಸಬಹುದು. 1-2 ಬೆಳ್ಳುಳ್ಳಿ ತೆಗೆದುಕೊಂಡು ಅದ್ರ ಸಿಪ್ಪೆ ತೆಗೆದು, ಬೆಳ್ಳುಳ್ಳಿಯನ್ನು ಉಗುರಿನ ಮೇಲೆ ಉಜ್ಜಬೇಕು. ಕೆಲ ಸಮಯ ಬಿಟ್ಟು ಕೈಗಳನ್ನು ಸೋಪಿನಿಂದ ಸ್ವಚ್ಛಗೊಳಿಸಬೇಕು. ಇದು ಉಗುರು ಉದ್ದವಾಗಿ ಬೆಳೆಯಲು ಸಹಕಾರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...