alex Certify ಇಂಥ ವಿಲಕ್ಷಣ, ವಿಚಿತ್ರ ಪ್ರೀ-ವೆಡ್ಡಿಂಗ್​ ಶೂಟ್​ ನೀವು ಜೀವನದಲ್ಲಿ ನೋಡಿರಲಿಕ್ಕಿಲ್ಲ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಥ ವಿಲಕ್ಷಣ, ವಿಚಿತ್ರ ಪ್ರೀ-ವೆಡ್ಡಿಂಗ್​ ಶೂಟ್​ ನೀವು ಜೀವನದಲ್ಲಿ ನೋಡಿರಲಿಕ್ಕಿಲ್ಲ…!

ಈಗ ಮದುವೆಗೂ ಮುನ್ನ ಮದುವೆಯಾಗುವ ಜೋಡಿ ಶೂಟಿಂಗ್​ (ಪ್ರೀ ವೆಡ್ಡಿಂಗ್​ ಶೂಟ್​) ಮಾಡಿಸಿಕೊಳ್ಳುವುದು ಸರ್ವೇ ಸಾಮಾನ್ಯ.

ಎಲ್ಲರಕ್ಕಿಂತ ಡಿಫರೆಂಟ್​ ಆಗಿ ಫೋಟೋಶೂಟ್​ ಮಾಡಿಸಿಕೊಳ್ಳುವ ಉದ್ದೇಶದಿಂದ ಅತ್ಯಂತ ಅಪಾಯಕಾರಿ ಶೂಟಿಂಗ್​ಗೆ ಹೋಗಿ ಜೀವ ಕಳೆದುಕೊಂಡಿರುವ ಉದಾಹರಣೆಗಳೂ ಇವೆ. ಆದರೆ ಇಲ್ಲಿ ವೈರಲ್​ ಆಗಿರುವ ವಿಡಿಯೋ ಒಂದರ ಶೂಟಿಂಗ್​ ಅಂತೂ ನೀವು ಜೀವಮಾನದಲ್ಲಿಯೇ ನೋಡಿರಲಿಕ್ಕಿಲ್ಲ.

13 ಸೆಕೆಂಡುಗಳ ಈ ವಿಡಿಯೋದಲ್ಲಿ ಭಾವಿ ದಂಪತಿ ಹುಚ್ಚು ಸಾಹಸ ಮಾಡಿದ್ದಾರೆ. ಮೋಟಾರು ಸೈಕಲ್‌ನಲ್ಲಿ ವಧು ಮತ್ತು ವರ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಅವರು ಬೈಕ್​ನಲ್ಲಿ ಕುಳಿತುಕೊಂಡಿದ್ದಾರೆ. ಎದುರಿಗೆ ಒಂದು ಕಾರಿದೆ. ಇವರ ಬೈಕ್​ ಅನ್ನು ಹಗ್ಗದಿಂದ ಕಟ್ಟಿರುವುದನ್ನು ನೋಡಬಹುದು. ಇದೇಕೆ ಹಗ್ಗ ಎನ್ನುವಷ್ಟರಲ್ಲಿಯೇ ಬೈಕ್​ ಮೇಲಿದ್ದ ಈ ಜೋಡಿ ಬೈಕ್​ ಸಹಿತ ಮೇಲೆ ಹಾರುತ್ತಾರೆ.

ಹೀಗೆ ಅವರು ಹಾರಿದ್ದು ಎದುರಿಗೆ ಇದ್ದ ಕಾರಿನ ಮೇಲೆ. ಬೈಕ್​ ಬ್ಯಾಲೆನ್ಸ್​ ಮಾಡಲು ಮುಂದೆ ಕೂಡ ಹಗ್ಗ ಕಟ್ಟಿರುವುದು ಕಂಡುಬರುತ್ತದೆ. ಕಾರಿನ ಮೇಲಿನಿಂದ ಸಿನಿಮಾದಲ್ಲಿ ಸ್ಟಂಟ್​ ಮಾಡುವಂತೆ ಈ ಬೈಕ್​ ಹಾರಿ ಕಾರನ್ನು ದಾಟಿ ಅತ್ತ ಹೋಗುತ್ತದೆ. ಆ ಮೇಲೆ ಅಲ್ಲೊಂದು ಕ್ರೇನ್​ ಕಾಣಿಸುತ್ತದೆ. ಆ ಕ್ರೇನ್ ​ಗೆ ಕಟ್ಟಿದ ಹಗ್ಗದ ಸಹಾಯದಿಂದ ಈ ಜೋಡಿಯನ್ನು ಹಾರಿಸಲು ಅನುವು ಮಾಡಿಕೊಟ್ಟಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...