alex Certify ಪೊಲೀಸರ ಕಾರಿನ ಕೆಳಗೆ ಮೊಸಳೆ; ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರ ಕಾರಿನ ಕೆಳಗೆ ಮೊಸಳೆ; ಫೋಟೋ ವೈರಲ್

ರಸ್ತೆಯಲ್ಲಿ ಪೊಲೀಸರ ಕಾರಿನ ಕೆಳಗೆ ಮೊಸಳೆಯೊಂದು ಸಿಕ್ಕಿಕೊಂಡ ಘಟನೆ ನಡೆದಿದೆ.

ಫ್ಲೋರಿಡಾ ಪೊಲೀಸರು ತಮ್ಮ ಕಾರಿನ ಅಡಿಯಲ್ಲಿ ಸಿಲುಕಿರುವ ಮೊಸಳೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಫ್ಲೋರಿಡಾದ ಲೀಸ್​ರ್ಬಗ್​ ಪೊಲೀಸ್​ ಗಸ್ತು ವಾಹನದ ಕೆಳಗೆ ಸಿಕ್ಕಿಹಾಕಿಕೊಂಡ ಮೊಸಳೆ ಸಾಕಷ್ಟು ಕಾಟಕೊಟ್ಟಿತು.

ವೆಲ್​, ನಾವು ಇದನ್ನು ಪ್ರತಿದಿನ ನೋಡುವುದಿಲ್ಲ……ವೇಗವಾಗಿ ಬಂದ ಮೊಸಳೆ ನಮ್ಮ ವಾಹನದ ಅಡಿಯಲ್ಲಿ ಸಿಕ್ಕಿಕೊಂಡಿತು. ಅದನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ ಮತ್ತು ವಾಹನಕ್ಕೆ ಯಾವುದೇ ದೊಡ್ಡ ಹಾನಿ ಆಗಿಲ್ಲ ಎಂದು ಫೋಟೋದೊಂದಿಗೆ ಎರಡು ಸಾಲು ಹಂಚಿಕೊಂಡಿದ್ದಾರೆ.

ಘಟನೆಯ ನಂತರ ಅಲಿಗೇಟರ್​ ಅನ್ನು ಎಲ್ಲಿಗೆ ಕೊಂಡೊಯ್ಯಲಾಯಿತು ಎಂಬುದನ್ನು ಖಚಿತಪಡಿಸಿಲ್ಲ. ಈ ಹಿಂದೆ ಫ್ಲೋರಿಡಾದಲ್ಲಿ ಇಂತಹ ಹಲವು ನಿದರ್ಶನ ವರದಿಯಾಗಿವೆ. ಕೆಲವು ವಾರಗಳ ಹಿಂದೆ, ಮೊಸಳೆಯು ಗಾಲ್ಫ್​ ಆಟಗಾರನ ಹಿಂದೆ ಕಾಣಿಸಿಕೊಂಡಿತ್ತು. ಮೆಲಿಸ್ಸಾ ಎಂಬ ಮಹಿಳೆ ಆ ಚಿತ್ರ ಹಂಚಿಕೊಂಡಿದ್ದರು.

ಈ ಪೊಲೀಸ್​ ವಾಹನದ ಕೆಳಗೆ ಮೊಸಳೆ ಸಿಕ್ಕಿಕೊಂಡ ಫೋಟೋಗೆ ನೆಟ್ಟಿಗರು ಬಗೆಬಗೆಯ ಕಾಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...