ಬಂಧನವಾಗುವುದನ್ನು ತಪ್ಪಿಸಿಕೊಳ್ಳಲು ಯುವಕನೊಬ್ಬ ಬೈಸಿಕಲ್ ಏರಿ ಪ್ರಯತ್ನಿದರೂ ಪೊಲೀಸರು ಕಾಲ್ನಡಿಗೆಯಲ್ಲೇ ಸಾಗಿ ಆತನನ್ನು ವಶಕ್ಕೆ ಪಡೆದ ಪ್ರಸಂಗ ಫ್ಲೋರಿಡಾದಲ್ಲಿ ನಡೆದಿದೆ.
24 ವರ್ಷದ ಟೊಮಾರಿಯಸ್ ಜೇಮ್ಸ್ ವ್ಯಾಗ್ನರ್ ಡ್ರಗ್ಸ್ ಸೇವನೆ ಪರೀಕ್ಷಾ ಷರತ್ತು ಉಲ್ಲಂಘಿಸಿದ ನಂತರ ಅಧಿಕಾರಿಯಿಂದ ತಪ್ಪಿಸಿಕೊಳ್ಳಲು ಸೈಕಲ್ ಏರಿದ್ದ. ಆದರೆ ಬೆನ್ನಟ್ಟಿ ಬಂಧಿಸಲಾಯಿತು.
ಬ್ರೆವಾರ್ಡ್ ಕೌಂಟಿ ಶೆರಿಫ್ ವೇಯ್ನ ಐವಿ ಪ್ರಕಾರ, ನಿಜ ಹೇಳಬೇಕೆಂದರೆ ವ್ಯಾಗ್ನರ್ ಬೈಸಿಕಲ್ ಬಳಸಿ ಪರಾರಿಯಾಗಲು ಪ್ರಯತ್ನಿಸುತ್ತಿರುವುದು ಅಥವಾ ಕಾಲ್ನಡಿಗೆಯಲ್ಲಿ ಓಡಿಹೋಗುವುದರಲ್ಲಿ ಯಾವುದು ಕೆಟ್ಟದು ಎಂದು ನನಗೆ ತಿಳಿದಿಲ್ಲ ಎಂದಿದ್ದಾರೆ. ಹಾಗೆಯೇ ತನಿಖಾ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.
ಇನ್ನೊಂದು ಘಟನೆಯಲ್ಲಿ ಸೋಮವಾರ ಫ್ಲೋರಿಡಾದ ವ್ಯಕ್ತಿಯೊಬ್ಬರು 120 ಡಾಲರ್ಗೆ ಬ್ಯಾಂಕ್ ಅನ್ನು ದರೋಡೆ ಮಾಡಲು ಪ್ರಯತ್ನಿಸಿದಾಗ 10 ನಿಮಿಷಗಳಲ್ಲಿ ಬಂಧಿಸಲಾಯಿತು.