
ಬಯೋಕಾನ್ ಲಿಮಿಟೆಡ್ನ ಕಾರ್ಯನಿರ್ವಾಹಕ ಅಧ್ಯಕ್ಷೆಯಾಗಿರುವ ಕಿರಣ್ ಮಂಜುಮ್ದಾರ್ ಶಾ ಈ ಮಾತಿಗೆ ಸಾಕ್ಷಿಯೆಂಬತಹ ವಿಡಿಯೋವನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಕೇವಲ 14 ಸೆಕೆಂಡ್ನ ಈ ವಿಡಿಯೋದಲ್ಲಿ ಒಣ ಎಲೆಯೊಂದನ್ನ ತೋರಿಸುತ್ತಾರೆ. ಈ ಒಣ ಎಲೆಯನ್ನ ಸೂರ್ಯನ ಬೆಳಕು ಇರುವ ಕಡೆ ತರುತ್ತಿದ್ದಂತೆಯೇ ಒಂದು ಆಶ್ಚರ್ಯ ಕಾದಿತ್ತು..! ನಾವೆಂದುಕೊಂಡಂತೆ ಅದು ಒಣ ಎಲೆ ಆಗಿರಲಿಲ್ಲ..! ಸೂರ್ಯನ ಬೆಳಕು ತಾಕುತ್ತಿದ್ದಂತೆಯೇ ಅದು ಚಿಟ್ಟೆ ಆಕೃತಿಯಲ್ಲಿ ಬದಲಾಗಿ ಹಾರಿದೆ. ಮತ್ತೆ ಸ್ವಲ್ಪ ದೂರ ಹೋಗಿ ಒಣ ಎಲೆಯ ಆಕೃತಿಯಲ್ಲೇ ಮಲಗಿದೆ.
ಈ ವಿಡಿಯೋ 116.5 ಸಾವಿರಕ್ಕಿಂತಲೂ ಅಧಿಕ ವೀವ್ಸ್ ಸಂಪಾದಿಸಿದೆ. ವಿಡಿಯೋ ನೋಡಿದ ನೆಟ್ಟಿಗರು ಪ್ರಕೃತಿಯ ಈ ವಿಸ್ಮಯ ಕಂಡು ಮೂಕವಿಸ್ಮಿತರಾಗಿದ್ದಾರೆ.