ಬೆಂಗಳೂರು: ಕರ್ತವ್ಯಲೋಪ ಎಸಗಿದ ಫ್ಲಿಪ್ಕಾರ್ಟ್ಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ.
ಗ್ರಾಹಕರೊಬ್ಬರಿಂದ ಹಣ ಸ್ವೀಕರಿಸಿ ಮೊಬೈಲ್ ಫೋನ್ ಡೆಲಿವರಿ ಮಾಡಿಲ್ಲದ ಕಾರಣದಿಂದ 42 ಸಾವಿರ ರೂಪಾಯಿಗಳನ್ನು ದಂಡದ ರೂಪದಲ್ಲಿ ಗ್ರಾಹಕರಿಗೆ ನೀಡುವಂತೆ ವೇದಿಕೆ ಆದೇಶಿಸಿದೆ.
ಮೊಬೈಲ್ ಫೋನ್ಗೆಂದು ಗ್ರಾಹಕರು ನೀಡಿದ್ದ 12,499 ರೂ.ವನ್ನು ವಾರ್ಷಿಕ ಶೇಕಡಾ 12ರ ಬಡ್ಡಿಯೊಂದಿಗೆ ಮರುಪಾವತಿಸಬೇಕು. ಇದರ ಜೊತೆಗೆ 20 ಸಾವಿರ ರೂ. ಪರಿಹಾರ ಹಾಗೂ ಕೋರ್ಟ್ ವೆಚ್ಚದ ರೂಪದಲ್ಲಿ 10 ಸಾವಿರ ರೂ. ನೀಡಬೇಕು ಎಂದು ಕೋರ್ಟ್ ಹೇಳಿದೆ.
ಗ್ರಾಹಕರು ಫ್ಲಿಪ್ಕಾರ್ಟ್ನಲ್ಲಿ ಮೊದಲೇ ಹಣ ನೀಡಿ ಮೊಬೈಲ್ ಆರ್ಡರ್ ಮಾಡಿದ್ದರು. ಆದರೆ ಮೊಬೈಲ್ ಬಂದಿರಲಿಲ್ಲ. ಸಂಸ್ಥೆ ಸರಿಯಾಗಿ ರಿಸ್ಪಾನ್ಸ್ ಮಾಡಿರಲಿಲ್ಲ. ಆದ್ದರಿಂದ ಅವರು ವೇದಿಕೆ ಮೊರೆ ಹೋಗಿದ್ದರು. ಹೀಗೆ ಮಾಡುವ ಮೂಲಕ ಫ್ಲಿಪ್ಕಾರ್ಟ್ ಸೇವೆಯಲ್ಲಿ ನಿರ್ಲಕ್ಷ್ಯ ಎಸಗಿದ್ದಲ್ಲದೆ, ಅನೀತಿಯ ವ್ಯಾಪಾರ ಅಭ್ಯಾಸ ನಡೆಸಿದೆ ಎಂದು ಆಯೋಗವು ಆದೇಶದಲ್ಲಿ ತಿಳಿಸಿದೆ.