alex Certify ಆಗಸದಲ್ಲಿದ್ದ ವೇಳೆ ದಿಢೀರನೇ ತೆರೆದುಕೊಂಡ ವಿಮಾನದ ಬಾಗಿಲು; ಬೆಚ್ಚಿಬೀಳಿಸುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸದಲ್ಲಿದ್ದ ವೇಳೆ ದಿಢೀರನೇ ತೆರೆದುಕೊಂಡ ವಿಮಾನದ ಬಾಗಿಲು; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಆಗಸದಲ್ಲಿ ಹಾರುತ್ತಿದ್ದ ಸರಕು ಸಾಗಾಟದ ವಿಮಾನವೊಂದರ ಬಾಗಿಲೊಂದು ದಿಢೀರ್‌ ತೆರೆದುಕೊಂಡ ಘಟನೆಯ ವಿಡಿಯೋ ವೈರಲ್ ಆಗಿದೆ.

ಜೂನ್ 12ರಂದು ಬ್ರೆಜ಼ಿಲ್‌ನ ಸಾವೋ ಲೂಯಿಸ್‌ನಿಂದ ಸಲ್ವಡಾರ್‌ಗೆ ಈ ವಿಮಾನ ಸಾಗುತ್ತಿತ್ತು. ಟ್ವಿಟರ್‌ನಲ್ಲಿ ಶೇರ್‌ ಮಾಡಲಾದ ಈ ವಿಡಿಯೋ ವೈಮಾನಿಕ ಕ್ಷೇತ್ರದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಭಾರೀ ಜೋರಾದ ಗಾಳಿಯು ವಿಮಾನದೊಳಗೆ ಬರುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದ್ದು, ವಿಮಾನದ ಹೊರಗಿನ ಮೋಡಗಳನ್ನೂ ಕಾಣಬಹುದಾಗಿದೆ.

“ಬ್ರೆಜ಼ಿಲಿಯನ್ ಗಾಯಕ ಟಿಯರ‍್ರಿ ಹಾಗೂ ಆತನ ಬ್ಯಾಂಡ್‌ ಸದಸ್ಯರನ್ನು ಹೊತ್ತು ಸಾಗುತ್ತಿದ್ದ ಎನ್‌ಎಚ್‌ಆರ್‌ ಟ್ಯಾಕ್ಸಿ ಏರೋ ಸಂಸ್ಥೆಯ ಎಂಬ್ರೇಯರ್‌-110ನಲ್ಲಿ ಈ ಘಟನೆ ಜರುಗಿದೆ,” ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ವಿಮಾನವು ಸುರಕ್ಷಿತವಾಗಿ ಸಾವೋ ಲೂಯಿಸ್‌ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...