alex Certify ಯುವತಿ ಹಾಡಿಗೆ ಎಂಜಾಯ್ ಮಾಡಿದ ಸಹ ಪ್ರಯಾಣಿಕರು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿ ಹಾಡಿಗೆ ಎಂಜಾಯ್ ಮಾಡಿದ ಸಹ ಪ್ರಯಾಣಿಕರು: ವಿಡಿಯೋ ವೈರಲ್

ದೂರದ ಪ್ರಯಾಣವನ್ನು ಹಲವು ಮಂದಿ ಇಷ್ಟಪಡುತ್ತಾರೆ. ಬೇಸರ ತಪ್ಪಿಸಲು ಕೆಲವರು ಸಂಗೀತ ಕೇಳಿದ್ರೆ, ಇನ್ನು ಕೆಲವರು ಪುಸ್ತಕ ಓದುತ್ತಾರೆ. ಆದರೆ, ಇಲ್ಲೊಬ್ಬಾಕೆ ಯುವತಿ ತಮ್ಮ ಸಹ ಪ್ರಯಾಣಿಕರೊಂದಿಗೆ ಬಾಲಿವುಡ್ ಚಿತ್ರದ ಹಾಡನ್ನು ಹಾಡಿದ್ದಾರೆ.

ವಿಮಾನದಲ್ಲಿ ಯುವತಿ ಹಳೆಯ ಬಾಲಿವುಡ್ ‘ಸಾಜ್ ರಾಹಿ ಗಾಲಿ ಮೇರಿ ಮಾ’ ಹಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸಹ ಪ್ರಯಾಣಿಕರು ಕೂಡ ಆಕೆಯೊಂದಿಗೆ ಸೇರಿ ಹಾಡು ಹಾಡಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಈ ಹಾಡು 1974ರ ಚಲನಚಿತ್ರ ಕುನ್ವಾರ ಬಾಪ್ ನದ್ದು. ಈ ಹಾಡನ್ನು ಮೊಹಮ್ಮದ್ ರಫಿ ಮತ್ತು ಮೆಹಮೂದ್ ಹಾಡಿದ್ದಾರೆ. ಪ್ರಯಾಣಿಕರು ಕೂಡ ಹಾಡನ್ನು ಆನಂದಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ರೈಲು ಮತ್ತು ಬಸ್ ಪ್ರಯಾಣದ ಸಮಯದಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿದೆ.

ವಿಡಿಯೋವನ್ನು ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, 1.9 ದಶಲಕ್ಷಕ್ಕೂ ಹೆಚ್ಚು ಲೈಕ್‌ಗಳು ಮತ್ತು 1.2 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ನೆಟ್ಟಿಗರು ಪ್ರಯಾಣಿಕರ ಉತ್ಸಾಹಭರಿತ ಮನೋಭಾವವನ್ನು ಇಷ್ಟಪಟ್ಟಿದ್ದಾರೆ.

ಒಬ್ಬ ಬಳಕೆದಾರರು, “ಈ ರೀತಿಯ ಸುಂದರ ಪ್ರಯಾಣಿಕರನ್ನು ನಾವು ಎಲ್ಲಿ ಕಾಣುತ್ತೇವೆ?” ಎಂದು ಪ್ರತಿಕ್ರಿಯಿಸಿದರೆ, ಇನ್ನೊಬ್ಬರು “ವಿಮಾನವು ಸ್ಥಳೀಯ ರೈಲಾಗಿ ಬದಲಾಯಿತು” ಎಂದು ಪ್ರತಿಕ್ರಿಯಿಸಿದ್ದಾರೆ.

https://www.instagram.com/reel/CUH0C7bD9Bh/?utm_source=ig_web_copy_link

https://www.instagram.com/p/CUH0C7bD9Bh/?utm_source=ig_embed&utm_campaign=embed_video_watch_again

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...