ಒಂದು ವೇಳೆ ನೀವು ವಿಮಾನದಲ್ಲಿ ಮೂರು ಸೀಟುಗಳ ಸಾಲಿನಲ್ಲಿ ಮಧ್ಯದಲ್ಲಿ ಕುಳಿತರೆ ನಿಮ್ಮ ಆರ್ಮ್‌ರೆಸ್ಟ್‌ಗಳು ಯಾವುದು ಎಂಬ ಪ್ರಶ್ನೆ ಎಂದಾದರೂ ಮೂಡಿರಬೇಕಲ್ಲವೇ?
ಮಧ್ಯದಲ್ಲಿ ಇರುವ ಎರಡೂ ಆರ್ಮ್‌ರೆಸ್ಟ್‌ಗಳು ನಿಮಗೆ ಸೇರುತ್ತವೆಯೇ? ಅಥವಾ ನಿಮ್ಮ ಎರಡೂ ಬದಿಯಲ್ಲಿ ಕುಳಿತ ಪ್ರಯಾಣಿಕರಿಗೆ ಅವು ಸೇರಿದ್ದವೇ? ನೀವು ನಿಮ್ಮ ಆರ್ಮ್‌ರೆಸ್ಟ್‌ಗಳನ್ನು ಅವರೊಂದಿಗೆ ಹಂಚಿಕೊಳ್ಳಬೇಕೇ?
ಈ ಟಾಪಿಕ್ ಅನೇಕ ವರ್ಷಗಳಿಂದ ಚರ್ಚೆಯ ವಿಷಯವಾಗಿದೆ. ಬಹುತೇಕ ಮಂದಿ ಈ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದ್ದಾರೆ.
ವಿಮಾನದ ಅಟೆಂಡೆಂಟ್ ಒಬ್ಬರು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ’ದಿ ಕಾಮನ್ ಸೆನ್ಸ್ ಆಫ್ ಫ್ಲೈಯಿಂಗ್’ ಹೆಸರಿನ ವಿಮಾನ ಪ್ರಯಾಣದ ಗೈಡ್‌ನ ಲೇಖಕ ಬೋರಿಸ್ ಮಿಲ್ಲನ್ ವಿಮಾನದಲ್ಲಿ ಪಾಲಿಸಬೇಕಾದ ಶಿಸ್ತಿನ ಬಗ್ಗೆ ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ್ದಾರೆ.
ಈ ರೀತಿ ಮೂರು ಸೀಟುಗಳ ಸಾಲಿನಲ್ಲಿ ಮಧ್ಯ ಕುಳಿತ ವ್ಯಕ್ತಿಗೆ ಎರಡು ಆರ್ಮ್‌ರೆಸ್ಟ್‌ಗಳು ಲಭಿಸುವುದು ಸಾಮಾನ್ಯ ಪ್ರಜ್ಞೆ ಎಂದಿರುವ ಬೋರಿಸ್‌ರ ಮಾತಿಗೆ ಪೂರಕವಾಗಿ ಶಿಸ್ತು ತಜ್ಞ ಆರ್ ಆರ್ ಸ್ಮಿತ್ ಕೆಲ ದಿನಗಳ ಹಿಂದೆ ಇಂಥದ್ದೇ ಮಾತುಗಳನ್ನು ಆಡಿದ್ದರು.
ಚಿಟ್ಟೆಗಳನ್ನು ಕಂಡು ಖುಷಿಯಾದ ಶ್ವಾನ…! ನೀವು ನೋಡಲೇಬೇಕು ಈ ವಿಡಿಯೋ
“ವಿಮಾನದಲ್ಲಿ ಮೂರು ಸೀಟುಗಳ ಸಾಲಿನಲ್ಲಿ ಕುಳಿತಾಗ ಮಧ್ಯ ಕುಳಿತ ವ್ಯಕ್ತಿಗೆ ಎರಡೂ ಆರ್ಮ್‌ರೆಸ್ಟ್‌ಗಳ ಮೇಲೆ ಹಕ್ಕು ಇರುತ್ತದೆ. ವಿಮಾನದೊಳಗಿನ ಮಧ್ಯ ಸೀಟಿನ ಒಂದು ಪಕ್ಕ ಕುಳಿತುಕೊಳ್ಳುವ ವ್ಯಕ್ತಿಗೆ ತನ್ನಿಷ್ಟ ಬಂದಾಗ ಓಡಾಡುವ ಹಾಗೂ ಕೈಗಳನ್ನು ವಿಸ್ತರಿಸುವ ಅವಕಾಶ ಇರುತ್ತದೆ. ಕಿಟಕಿ ಬಳಿಯ ವ್ಯಕ್ತಿಗೆ ಕಿಟಕಿಗೆ ಒರಗುವ ಅವಕಾಶದೊಂದಿಗೆ ಕಿಟಕಿಯಿಂದ ಆಚೆ ನೋಡುವ ಅವಕಾಶ ಇರುತ್ತದೆ. ಆದರೆ ಮಧ್ಯದಲ್ಲಿ ಕುಳಿತ ವ್ಯಕ್ತಿಗೆ ಎರಡೂ ಆರ್ಮ್‌ರೆಸ್ಟ್‌ಗಳ ಮೇಲೆ ಕೈ ಹಾಕಿಕೊಳ್ಳುವ ಅವಕಾಶ ಇರುತ್ತದೆ,” ಎಂದಿದ್ದಾರೆ.