alex Certify ಬಾಹ್ಯಾಕಾಶ ನಿಲ್ದಾಣದ ಸಮೀಪ ಏಕಕಾಲಕ್ಕೆ 10 ಹಾರುವ ತಟ್ಟೆ ಪ್ರತ್ಯಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶ ನಿಲ್ದಾಣದ ಸಮೀಪ ಏಕಕಾಲಕ್ಕೆ 10 ಹಾರುವ ತಟ್ಟೆ ಪ್ರತ್ಯಕ್ಷ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಮೀಪ ಸುಮಾರು 10 ಗುರುತಿಸಲಾಗದ ಹಾರುವ ತಟ್ಟೆಗಳ ಓಡಾಟವನ್ನ ನಾಸಾದ ನೇರ ಪ್ರಸಾರದ ದೃಶ್ಯಗಳಲ್ಲಿ ಕಂಡುಬಂದಿದೆ.

ಹದ್ದಿನ ಕಣ್ಣಿನ ಬಾಹ್ಯಾಕಾಶ ವೀಕ್ಷಕರು ಈ ದೃಶ್ಯಾವಳಿಗಳನ್ನ ಗುರುತಿಸಿದ್ದು ಈ ಹಾರುವ ತಟ್ಟೆಗಳು ದಕ್ಷಿಣ ಅಟ್ಲಾಂಟಿಕ್​ ಸಾಗರದ ಮೇಲೆ ವೃತ್ತಾಕಾರದ ರೀತಿಯಲ್ಲಿ ರೂಪುಗೊಂಡಿವೆ ಎಂದು ಹೇಳಿದ್ದಾರೆ. ಈ ದೃಶ್ಯಗಳನ್ನ ಸೂಕ್ಷ್ಮವಾಗಿ ಅವಲೋಕಿಸಲಾಗಿದ್ದು ಗುರುತಿಸಲಾಗದ ಹಾರುವ ತಟ್ಟೆಗಳು ವೃತ್ತಾಕಾರದ ಕಕ್ಷೆಯಲ್ಲಿ ಸಂಚರಿಸಿವೆ ಎನ್ನಲಾಗಿದೆ.

ಅಂದಹಾಗೆ ಈ ವಿಷಯದ ಬಗ್ಗೆ ನಾಸಾ ಇನ್ನೂ ಅಧಿಕೃತ ಹೇಳಿಕೆಯನ್ನ ಬಿಡುಗಡೆ ಮಾಡಿಲ್ಲ. ಆದರೆ ಈ ದೃಶ್ಯಾವಳಿಗಳು ಮಾತ್ರ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.

ಯುಟ್ಯೂಬ್​​ನಲ್ಲಿ ಈ ದೃಶ್ಯಾವಳಿಗಳನ್ನ ಶೇರ್​ ಮಾಡಿರುವ ಓರ್ವರು : ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಂಡುಬಂದ ದೃಶ್ಯಾವಳಿಯಾಗಿದ್ದು ಬೆಳಗ್ಗೆ 8:30ರ ಸುಮಾರಿಗೆ ದಕ್ಷಿಣ ಅಟ್ಲಾಂಟಿಕ ಸಮುದ್ರ ಮೇಲ್ಭಾಗದಲ್ಲಿ ಇದು ಸಂಭವಿಸಿದೆ ಎಂದು ಹೇಳಿದ್ದಾರೆ. ಮಾತ್ರವಲ್ಲದೇ 10 ಗುರುತಿಸಲಾಗದ ಹಾರುವ ತಟ್ಟೆಗಳು ಭೂಮಿಯ ಮೇಲೆ ಸಂಚರಿಸುತ್ತಿದೆ ಎಂದೂ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...