ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಮೀಪ ಸುಮಾರು 10 ಗುರುತಿಸಲಾಗದ ಹಾರುವ ತಟ್ಟೆಗಳ ಓಡಾಟವನ್ನ ನಾಸಾದ ನೇರ ಪ್ರಸಾರದ ದೃಶ್ಯಗಳಲ್ಲಿ ಕಂಡುಬಂದಿದೆ.
ಹದ್ದಿನ ಕಣ್ಣಿನ ಬಾಹ್ಯಾಕಾಶ ವೀಕ್ಷಕರು ಈ ದೃಶ್ಯಾವಳಿಗಳನ್ನ ಗುರುತಿಸಿದ್ದು ಈ ಹಾರುವ ತಟ್ಟೆಗಳು ದಕ್ಷಿಣ ಅಟ್ಲಾಂಟಿಕ್ ಸಾಗರದ ಮೇಲೆ ವೃತ್ತಾಕಾರದ ರೀತಿಯಲ್ಲಿ ರೂಪುಗೊಂಡಿವೆ ಎಂದು ಹೇಳಿದ್ದಾರೆ. ಈ ದೃಶ್ಯಗಳನ್ನ ಸೂಕ್ಷ್ಮವಾಗಿ ಅವಲೋಕಿಸಲಾಗಿದ್ದು ಗುರುತಿಸಲಾಗದ ಹಾರುವ ತಟ್ಟೆಗಳು ವೃತ್ತಾಕಾರದ ಕಕ್ಷೆಯಲ್ಲಿ ಸಂಚರಿಸಿವೆ ಎನ್ನಲಾಗಿದೆ.
ಅಂದಹಾಗೆ ಈ ವಿಷಯದ ಬಗ್ಗೆ ನಾಸಾ ಇನ್ನೂ ಅಧಿಕೃತ ಹೇಳಿಕೆಯನ್ನ ಬಿಡುಗಡೆ ಮಾಡಿಲ್ಲ. ಆದರೆ ಈ ದೃಶ್ಯಾವಳಿಗಳು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.
ಯುಟ್ಯೂಬ್ನಲ್ಲಿ ಈ ದೃಶ್ಯಾವಳಿಗಳನ್ನ ಶೇರ್ ಮಾಡಿರುವ ಓರ್ವರು : ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಂಡುಬಂದ ದೃಶ್ಯಾವಳಿಯಾಗಿದ್ದು ಬೆಳಗ್ಗೆ 8:30ರ ಸುಮಾರಿಗೆ ದಕ್ಷಿಣ ಅಟ್ಲಾಂಟಿಕ ಸಮುದ್ರ ಮೇಲ್ಭಾಗದಲ್ಲಿ ಇದು ಸಂಭವಿಸಿದೆ ಎಂದು ಹೇಳಿದ್ದಾರೆ. ಮಾತ್ರವಲ್ಲದೇ 10 ಗುರುತಿಸಲಾಗದ ಹಾರುವ ತಟ್ಟೆಗಳು ಭೂಮಿಯ ಮೇಲೆ ಸಂಚರಿಸುತ್ತಿದೆ ಎಂದೂ ಹೇಳಿದ್ದಾರೆ.