![](https://kannadadunia.com/wp-content/uploads/2021/10/flat_with_hidden_kitchen.jpg)
ಚೆಲ್ಸಿಯಾದಲ್ಲಿನ ಕಿಂಗ್ಸ್ ರಸ್ತೆಗೆ ಸಮೀಪದಲ್ಲಿ ಇರುವ ಅಪಾರ್ಟ್ಮೆಂಟ್ ಜನಪ್ರಿಯ ಮತ್ತು ಸುರಕ್ಷಿತವಾದ ಪೋರ್ಟರ್ ಬ್ಲಾಕ್‌ನಲ್ಲಿ ಸೊಗಸಾದ, ಸಂಪೂರ್ಣ ಸುಸಜ್ಜಿತ ಸೌಕರ್ಯಗಳನ್ನು ಒದಗಿಸುತ್ತದೆ. ಫೋಟೋದಲ್ಲಿ ನೋಡುವಾಗ ಮನೆ ತುಂಬೆಲ್ಲಾ ಪುಸ್ತಕದ ಭಂಡಾರವೇ ಇರುವಂತೆ ಕಾಣುತ್ತದೆ.
ಆದರೆ, ನೀವೇನಾದ್ರೂ ಕಪಾಟಿನಲ್ಲಿ ಇರಿಸಲಾಗಿರುವ ಪುಸ್ತಕಗಳನ್ನು ತೆಗೆದುಕೊಳ್ಳಲು ಹೋದ್ರೆ ಖಂಡಿತಾ ಶಾಕ್ ಆಗುತ್ತೀರಿ..! ಯಾಕಂದ್ರೆ ಅಲ್ಲಿ ಪುಸ್ತಕವನ್ನು ಜೋಡಿಸಲಾಗಿಲ್ಲ ಬದಲಾಗಿ ಅಡುಗೆಮನೆಯನ್ನು ಮರೆಮಾಚಲು ಪುಸ್ತಕದ ಕಪಾಟಿನಂತೆ ವಿನ್ಯಾಸಗೊಳಿಸಲಾಗಿದೆ.
ಅಪಾರ್ಟ್ಮೆಂಟ್ ಒಂದು ನಯವಾದ ತೆರೆದ ಪ್ಲಾನ್ ಅಡುಗೆಮನೆಯೊಂದಿಗೆ ದೊಡ್ಡ ಸ್ವಾಗತ ಕೊಠಡಿಯನ್ನು ಒಳಗೊಂಡಿದೆ. ಜಾಣತನದಿಂದ ಅಡುಗೆ ಮನೆಯನ್ನು ಮರೆಮಾಡುವಂತಹ ವಿನ್ಯಾಸ ನಿರ್ಮಿಸಲಾಗಿದೆ.