ಮುಂದಿನ ವಾರ ದೀಪಾವಳಿ ಸಂಭ್ರದಲ್ಲಿ ಇಡೀ ದೇಶವೇ ಮುಳುಗಿ ಏಳಲಿದೆ. ಕೊರೊನಾ ಆಪತ್ತಿನಿಂದ ಪಾರಾಗಿರುವ ಜನರು ದೀಪಾವಳಿಯ ಬೆಳಕಿನಲ್ಲಿ ತಮ್ಮ ಹಿಂದಿನ ನೋವುಗಳನ್ನು ಬದಿಗೆ ಸರಿಸುತ್ತಾ ಸಂಭ್ರಮಿಸಲು ಸಿದ್ಧತೆಯಲ್ಲಿ ತೊಡಗಿದ್ದಾರೆ. ಇದೇ ವೇಳೆ ವಾರ್ಷಿಕ ಬೋನಸ್ ಕೂಡ ಬಹುತೇಕ ಕಂಪನಿಗಳ ಉದ್ಯೋಗಿಗಳ ಪಾಲಿಗೆ ಒಲಿಯಲಿದೆ.
ಈ ಹಣವು ಸಂಬಳದಂತಲ್ಲ, ಸ್ವಲ್ಪ ಹೆಚ್ಚು ವಿಶೇಷವಾಗಿದೆ. ಯಾಕೆಂದರೆ ಒಂದು ವರ್ಷಪೂರ್ತಿ ಪಟ್ಟ ಶ್ರಮಕ್ಕೆ ಸಿಗುವ ಫಲವಿದು. ಇದರ ಬಗ್ಗೆ ಬಹಳಷ್ಟು ಉದ್ಯೋಗಿಗಳಿಗೆ ವಿಶೇಷ ಒಲವು ಇದೆ.
ಹಾಗಾಗಿ ಬಹಳ ಜಾಗರೂಕತೆಯಿಂದ ಈ ಬೋನಸ್ ಮೊತ್ತವನ್ನು ಖರ್ಚು ಮಾಡಿರಿ. ಆ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.
ICSE 10, 12 ನೇ ತರಗತಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ, ಮೊದಲ ಅವಧಿಯ ಬೋರ್ಡ್ ಪರೀಕ್ಷೆ ಆಫ್ಲೈನ್
1. ಸಾಲದ ಹೊರೆ ತಗ್ಗಿಸಿಕೊಳ್ಳಿರಿ
ವೈಯಕ್ತಿಕ ಸಾಲ ಪಡೆದಿದ್ದರೆ, ಕ್ರೆಡಿಟ್ ಕಾರ್ಡ್ ಸಾಲ ಬಾಕಿ ಉಳಿದಿದ್ದರೆ, ಅಲ್ಪಾವಧಿಯ ಸಾಲಕ್ಕೆ ಬಡ್ಡಿ ಕಟ್ಟುತ್ತಿದ್ದರೆ, ಅಂಥವುಗಳಿಂದ ಕೈತೊಳೆದುಕೊಂಡು ಬಿಡಿರಿ. ಬೋನಸ್ ಹಣವನ್ನು ಇಂಥ ಮಾಸಿಕ-ವಾರ್ಷಿಕ ಕಮಿಟ್‌ಮೆಂಟ್‌ಗಳಿಗೆ ವಿನಿಯೋಗಿಸಿ ಹಗುರಾಗಿರಿ. ಗೃಹ ಸಾಲದ ಇಎಂಐ ಹೊರೆ ತಗ್ಗಿಸಲು ಕೂಡ ಬೋನಸ್ ಬಳಸಬಹುದು.
2. ತುರ್ತು ನಿಧಿ ಹೆಚ್ಚಿಸಿ
ಆಪತ್ಕಾಲ ಯಾವಾಗ ಎದುರಾಗುತ್ತದೆ ಎನ್ನುವುದನ್ನು ಊಹಿಸುವುದು ಕೂಡ ಈ ಕೊರೊನಾ ಕಾಲಘಟ್ಟದಲ್ಲಿ ಬಹಳ ಕಷ್ಟವಾಗಿದೆ. ಅನಿರೀಕ್ಷಿತ ವೆಚ್ಚಗಳು, ಕೆಲಸ ಬದಲಾವಣೆ ಅನಿವಾರ್ಯತೆ, ಆರೋಗ್ಯ ಸಂಬಂಧಿ ಖರ್ಚುಗಳು ಎದುರಾದರೆ ಉಳಿತಾಯದ ಹಣವು ಖಾಲಿ ಆಗುವ ಆತಂಕವನ್ನು ’ತುರ್ತು ನಿಧಿ ಶೇಖರಣೆ’ ತಪ್ಪಿಸಲಿದೆ. ಮೂಲವೇತನ ಕನಿಷ್ಠ ಆರು ತಿಂಗಳ ಕಾಲ ಉಳಿತಾಯ ಮಾಡಿ, ಕೈಗೆಟಕುವಂತೆ ಇರಿಸಕೊಳ್ಳುವುದನ್ನೇ ತುರ್ತು ನಿಧಿ ಎನ್ನಲಾಗುತ್ತದೆ.
ಅಬ್ಬಬ್ಬಾ…! ಬೃಹತ್ ಗಾತ್ರದ ಹೆಬ್ಬಾವು ಎತ್ತಲು ಕ್ರೇನ್ ಬಳಕೆ
3. ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ)
ನಿಯಮಿತ ಅವಧಿಗೆ ಹೂಡಿಕೆ ಮಾಡುತ್ತಾ ದೀರ್ಘಾವಧಿಯಲ್ಲಿ ಉತ್ತಮ ಮೊತ್ತವನ್ನು ಪಡೆಯಲು ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ)ಗಳು ಬಹಳ ಉಪಯುಕ್ತವಾಗಿವೆ. ದೈನಂದಿನ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ, ವಾರ್ಷಿಕ ಅವಧಿಯ ಯೋಜನೆಗಳಲ್ಲಿ ಕನಿಷ್ಠ 500 ರೂ.ಗಳಿಂದ ಹೂಡಿಕೆ ಮಾಡಲು ಅವಕಾಶವಿದೆ. ಮ್ಯೂಚುಯೆಲ್ ಫಂಡ್ಸ್‌ಗಳಲ್ಲೂ ಹೂಡಿಕೆ ಉತ್ತಮವಾಗಿರುತ್ತದೆ.
4. ವಿಮೆಯ ಮಿತಿ ಹೆಚ್ಚಿಸಿಕೊಳ್ಳಿರಿ
ಕೊರೊನಾ ಕಾಲಘಟ್ಟದ ಅಂತ್ಯದಲ್ಲಿರುವ ನಾವುಗಳು ಆರೋಗ್ಯ ವಿಮೆಯನ್ನು ಚಾಲ್ತಿಯಲ್ಲಿಟ್ಟುಕೊಳ್ಳುವುದು ಎಷ್ಟು ಮುಖ್ಯವೋ, ಹೆಚ್ಚು ಮಿತಿ ಇರುವ ಹಾಗೂ ಎಲ್ಲ ರೀತಿಯ ಚಿಕಿತ್ಸಾ ವೆಚ್ಚಗಳನ್ನು ಭರಿಸುವ ವಿಮೆಯ ಚಂದಾದಾರಾಗುವುದು ಬಹಳ ಮುಖ್ಯವಾಗಿದೆ.
ಸದ್ಯದ ಮಟ್ಟಿಗೆ ವಿಮೆ ಪಾಲಿಸಿಯು ಸಾಮಾನ್ಯವಾಗಿದ್ದರೆ, ಅದರ ಮಿತಿಯನ್ನು ಹೆಚ್ಚಿಸಿಕೊಳ್ಳಲು ಹೆಚ್ಚುವರಿ ಪ್ರೀಮಿಯಂ ಮೊತ್ತವಾಗಿ ಬೋನಸ್ ಬಳಸಿಕೊಳ್ಳಬಹುದು. ಅಂದರೆ, 2 ಲಕ್ಷ ರೂ. ಆಸ್ಪತ್ರೆ ಖರ್ಚನ್ನು ಭರಿಸುವ ವಿಮೆ ಇದ್ದಲ್ಲಿ ಅದನ್ನು ವಾರ್ಷಿಕ 5 ಲಕ್ಷ ರೂ.ಗೆ ಹೆಚ್ಚಿಸಿಕೊಳ್ಳಬಹುದು. ಕುಟುಂಬಸ್ಥರೆಲ್ಲರನ್ನೂ ವಿಮೆ ವ್ಯಾಪ್ತಿಗೆ ಸೇರಿಸುವುದು ಜಾಗರೂಕತೆಯಿಂದ ಉತ್ತಮ.
5. ನಿವೃತ್ತಿ ಸಂಗ್ರಹ ಹೆಚ್ಚಿಸಿ
ನಿವೃತ್ತಿ ಜೀವನ ಎಲ್ಲರಿಗೂ ಆತಂಕಕಾರಿಯೇ ಸರಿ. ಕೆಲಸವಿಲ್ಲದೇ ಕೈನಲ್ಲಿರುವ ಅಲ್ಪಸ್ವಲ್ಪ ಹಣವನ್ನೇ ಬಾಕಿ ಜೀವನದುದ್ದಕ್ಕೂ ಖರ್ಚು ಮಾಡಬೇಕಾಗಿರುತ್ತದೆ. ಹಾಗಾಗಿ ಮಧ್ಯವಯಸ್ಕರಿದ್ದಾಗಲೇ ನಿವೃತ್ತ ಜೀವನ ಉಳಿತಾಯ ಅಥವಾ ಸಂಗ್ರಹ ರೂಪದಲ್ಲಿ ಸಾಕಷ್ಟು ಹಣ ಒಟ್ಟು ಹಾಕುವುದು ಒಳ್ಳೆಯದು.
ವೇತನದ ಸ್ವಲ್ಪ ಭಾಗವನ್ನು ಉಳಿತಾಯಕ್ಕೆ ಹಾಕುತ್ತಿದ್ದಲ್ಲಿ, ಬೋನಸ್ ಕೂಡ ಅದೇ ಸಂಗ್ರಹಕ್ಕೆ ಹೋದರೆ ಕಷ್ಟಕಾಲಕ್ಕೆ ಉಪಯೋಗವಾಗಲಿದೆ. ಸಂಭ್ರಮಾಚರಣೆ ಹೆಸರಿನಲ್ಲಿ ದುಂದುವೆಚ್ಚ ಮಾಡುವುದಕ್ಕಿಂತ ಭವಿಷ್ಯದ ಭದ್ರತೆಗಾಗಿ ಉಳಿತಾಯ ಮಾಡುವುದು ಜಾಣರ ಲಕ್ಷಣವಾಗಿದೆ.