ಐದು ಬೀದಿನಾಯಿಗಳ ಮೇಲೆ ದುಷ್ಕರ್ಮಿಗಳು ಆಸಿಡ್ ದಾಳಿ ನಡೆಸಿದ ಅಮಾನುಷ ಘಟನೆ ಮಧ್ಯ ಪ್ರದೇಶದಲ್ಲಿ ಉಜ್ಜಿಯಿನಿಯಲ್ಲಿ ನಡೆದಿದೆ. ಪ್ರಾಣಿ ಪ್ರೇಮಿಗಳಿಂದ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಸಿಡ್ ದಾಳಿಗೆ ಒಳಗಾಗಿದ್ದ ಬೀದಿ ನಾಯಿಗಳು ಪ್ರಾಣ ಬಿಟ್ಟಿವೆ ಎನ್ನಲಾಗಿದೆ.
ಇನ್ನೂ ಪತ್ತೆಯಾಗದ ಆರೋಪಿಗಳ ವಿರುದ್ಧ ಸೆಕ್ಷನ್ 428 ಸೇರಿದಂತೆ ವಿವಿಧ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂದೋರ್ನ ಪ್ರಾಣಿ ದಯಾ ಸಂಘದ ಸಹಾಯವಾಣಿಗೆ ಬೀದಿ ನಾಯಿಗಳ ಮೇಲೆ ಆಸಿಡ್ ದಾಳಿಯ ಬಗ್ಗೆ ಕರೆ ಬರುತ್ತಿದ್ದಂತೆಯೇ ಈ ಪ್ರಕರಣ ಬೆಳಕಿಗೆ ಬಂದಿದೆ.
ಉಜ್ಜಯಿನಿಯ ನಾಗಜಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐದು ಬೀದಿ ನಾಯಿಗಳ ಬಾಯಿಗೆ ಯಾರೋ ಅಪರಿಚಿತರು ಆಸಿಡ್ ಸುರಿದಿದ್ದಾರೆ ಎಂದು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು ಎಂದು ಪೀಪಲ್ ಫಾರ್ ಆನಿಮಲ್ಸ್ನ ಇಂದೋರ್ ಘಟಕದ ಅಧ್ಯಕ್ಷ ಪ್ರಿಯಾಂಶು ಜೈನ್ ಹೇಳಿದ್ರು.
ನಾಲ್ಕರಿಂದ ಎಂಟು ವರ್ಷದ ಪ್ರಾಯದ ಈ ಶ್ವಾನಗಳನ್ನು ಸ್ಥಳೀಯರು ಕೂಡಲೇ ಪಶು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಶ್ವಾನಗಳು ಅಷ್ಟರಲ್ಲಾಗಲೇ ಸಾವನ್ನಪ್ಪಿವೆ ಎನ್ನಲಾಗಿದೆ.