alex Certify ಮಹಿಳೆ ಚಿನ್ನ ಅಡಗಿಸಿಟ್ಟುಕೊಂಡಿದ್ದೆಲ್ಲಿ ಅಂತ ತಿಳಿದ್ರೆ ಶಾಕ್‌ ಆಗ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಚಿನ್ನ ಅಡಗಿಸಿಟ್ಟುಕೊಂಡಿದ್ದೆಲ್ಲಿ ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ವಿದೇಶದಿಂದ ಚಿನ್ನದ ಕಳ್ಳಸಾಗಣೆಯ ಪ್ರಯತ್ನವನ್ನು ಭೇದಿಸಿದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಓರ್ವ ಮಹಿಳೆ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಈ ಅವಧಿಯಲ್ಲಿ ಕಳ್ಳಸಾಗಾಟಗಾರರ ಬಳಿಯಿದ್ದ 1.94 ಕೋಟಿ ರೂಪಾಯಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಆರಂಭಿಕ ತನಿಖೆಯ ಆಧಾರದ ಮೇಲೆ, ಶಂಕಿತರಲ್ಲಿ ಒಬ್ಬರು ಚಿನ್ನದ ಡಸ್ಟ್‌ ಅನ್ನು(ಪುಡಿ) ತಮ್ಮ ಗುದನಾಳದಲ್ಲಿ ಬಚ್ಚಿಟ್ಟುಕೊಂಡು ಬಂದಿದ್ದಾರೆ. ಫೆಬ್ರವರಿ 3ರಂದು ದುಬೈನಿಂದ ಆಗಮಿಸಿದ ವಿಮಾನದಲ್ಲಿ ಒಂದಿಳಿದ ಮಹಿಳೆಯೊಬ್ಬರನ್ನು ಚಿನ್ನ ಕಳ್ಳಸಾಗಣೆ ಶಂಕೆಯ ಮೇಲೆ ತಡೆದ ನಂತರ ಘಟನೆ ಬೆಳಕಿಗೆ ಬಂದಿದೆ.

ಎಮಿರೇಟ್ಸ್ ಜಾಹೀರಾತಿಗಾಗಿ ಬುರ್ಜ್ ಖಲೀಫಾ ಏರಿದ ಮಾಡೆಲ್

ಅಧಿಕಾರಿಗಳು ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ, ತನ್ನ ಗುದನಾಳದಲ್ಲಿ ಚಿನ್ನವನ್ನು ಬಚ್ಚಿಕೊಂಡು ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಕಸ್ಟಮ್ಸ್ ಅಧಿಕಾರಿಯೊಬ್ಬರು, “ಶೋಧ ನಡೆಸಿದ ವೇಳೆ, ಪ್ರಯಾಣಿಕರು ಧರಿಸಿದ್ದ ಒಳ ಉಡುಪುಗಳಲ್ಲಿ 546ಗ್ರಾಂ ಚಿನ್ನದ ಪುಡಿ ಭಾರೀ ನಾಜೂಕಾಗಿ ಇಟ್ಟುಕೊಂಡು ಬಂದಿರುವುದನ್ನು ನಾವು ಕಂಡುಕೊಂಡಿದ್ದೇವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 38 ಲಕ್ಷ ರೂ. ಮೌಲ್ಯದ 868 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ” ಎಂದಿದ್ದಾರೆ.

ಜನವರಿ 2 ಮತ್ತು ಜನವರಿ 4ರ ನಡುವೆ ಶಾರ್ಜಾ ಮತ್ತು ಅಬುಧಾಬಿಯಿಂದ ಬಂದ ನಾಲ್ಕು ಪ್ರಯಾಣಿಕರನ್ನು ತಡೆಹಿಡಿಯಲಾಗಿದ್ದು, ಈ ಎಲ್ಲಾ ನಾಲ್ಕು ಪ್ರಯಾಣಿಕರು ತಮ್ಮ ಗುದನಾಳದಲ್ಲಿ ಚಿನ್ನದ ಪುಡಿಯನ್ನು ಬಚ್ಚಿಟ್ಟುಕೊಂಡು ದೇಶದೊಳಗೆ ಆಗಮಿಸಿದ್ದರು.

ಈ ನಾಲ್ವರು ಶಂಕಿತರಿಂದ 1.56 ಕೋಟಿ ಮೌಲ್ಯದ ಒಟ್ಟು 3.6 ಕೆಜಿ ಚಿನ್ನದ ಪುಡಿ ಪತ್ತೆಯಾಗಿದೆ ಎಂದು ಪ್ರಕರಣದ ವರದಿಯಿಂದ ತಿಳಿದು ಬಂದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...