ಮಹಾರಾಷ್ಟ್ರದ ಯಾತ್ಮಲ್ ಜಿಲ್ಲೆಯ ವಾಣಿ ಗ್ರಾಮದಲ್ಲಿ ಸ್ಯಾನಿಟೈಸರ್ ಸೇವಿಸಿದ ಸಾವನ್ನಪ್ಪಿದ್ದಾರೆ. ಕೊರೋನಾ ಕಾರಣದಿಂದ ಮದ್ಯದಂಗಡಿಗಳನ್ನು ಬಂದ್ ಮಾಡಿದ ಹಿನ್ನೆಲೆಯಲ್ಲಿ ಮದ್ಯ ಸಿಗದ ನೂತನ್ಮ ಗಣೇಶ್, ಸಂತೋಷ್, ಮತ್ತು ಸುನೀಲ್ ಎಂಬುವರು ಸ್ಯಾನಿಟೈಸರ್ ಸೇವಿಸಿ ಮೃತಪಟ್ಟಿದ್ದಾರೆ.
ಮದ್ಯದ ಬದಲು ಸ್ಯಾನಿಟೈಸ್ ಸೇವಿಸಿ ಮೃತಪಟ್ಟ ಐವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆನ್ನಲಾಗಿದೆ.