ಶಾಕಿಂಗ್: ಭಾರೀ ಮಳೆಯೊಂದಿಗೆ ಆಕಾಶದಿಂದ ಉದುರಿದ ಮೀನುಗಳು…..! 19-10-2021 7:55PM IST / No Comments / Posted In: Latest News, India, Live News ಮಳೆ ಬಂದಾಗ ಗುಡುಗು – ಮಿಂಚು ಬರೋದು ಸಾಮಾನ್ಯ. ಆಲಿಕಲ್ಲಿನ ಮಳೆ ಕೂಡ ಸುರಿಯಬಹುದು. ಆದರೆ ಭಾರೀ ಗಾಳಿ ಹಾಗೂ ಮಳೆ ಸುರಿಯುತ್ತಿದ್ದ ವೇಳೆಯಲ್ಲಿ ಆಕಾಶದಿಂದ ಮೀನುಗಳು ಬಿದ್ದಿದ್ದನ್ನು ಕಂಡು ಉತ್ತರ ಪ್ರದೇಶದ ಭಡೋಹಿ ಜಿಲ್ಲೆಯ ನಿವಾಸಿಗಳು ಆಶ್ಚರ್ಯಚಕಿತರಾಗಿದ್ದಾರೆ. ಚೌರಿ ಎಂಬ ಗ್ರಾಮದಲ್ಲಿ ಮಳೆಯ ಜೊತೆಯಲ್ಲಿ ಸಣ್ಣ ಸಣ್ಣ ಮೀನುಗಳು ಸಹ ಆಕಾಶದಿಂದ ಉದುರಿವೆ. ಸ್ಥಳೀಯರು ಸುಮಾರು 50 ಕೆಜಿಯಷ್ಟು ಮೀನುಗಳನ್ನು ಸಂಗ್ರಹಿಸಿದ್ದಾರೆ. ಆದರೆ ಇವುಗಳು ವಿಷಕಾರಿಯಾಗಿರಬಹುದು ಎಂದು ಭಾವಿಸಿ ಅವುಗಳನ್ನು ಕೊಳ ಹಾಗೂ ಹೊಂಡಗಳಲ್ಲಿ ಎಸೆದಿದ್ದಾರೆ. ಗಳಿಕೆಯಲ್ಲಿ ದಾಖಲೆ: ಗಲ್ಲಾಪೆಟ್ಟಿಗೆ ಲೂಟಿ ಮಾಡಿದ ‘ಕೋಟಿಗೊಬ್ಬ’, ನಾಲ್ಕೇ ದಿನದಲ್ಲಿ 40 ಕೋಟಿ ಕಲೆಕ್ಷನ್ ಚೌರಿಯ ಕಂಧಿಯಾ ಗೇಟ್ ಪ್ರದೇಶದಲ್ಲಿ ಮೀನುಗಳು ಬೀಳುತ್ತಿವೆ ಎಂಬ ಸುದ್ದಿ ಕೇಳಿದ ತಕ್ಷಣವೇ ಅಕ್ಕ ಪಕ್ಕದ ಗ್ರಾಮದವರೆಲ್ಲ ಇಲ್ಲಿಗೆ ಆಗಮಿಸಿದ್ದಾರೆ. ಮನೆಯ ಛಾವಣಿ, ಬೀದಿ ಹಾಗೂ ತೋಟಗಳಲ್ಲಿ ಮೀನುಗಳನ್ನು ಸಂಗ್ರಹಿಸಿದ್ದಾರೆ. ಹವಾಮಾನ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ, ಕಡಿಮೆ ಒತ್ತಡದ ಪ್ರದೇಶದ ರಚನೆಯಿಂದ ಈ ರೀತಿ ಆಗುತ್ತದೆ. ನದಿ, ಕೊಳ ಸೇರಿದಂತೆ ಇತರೆ ಜಲಮೂಲಗಳ ಬಳಿ ರೂಪುಗೊಂಡ ಚಂಡಮಾರುತದಲ್ಲಿ ಮೀನುಗಳು ಹಾರಿ ಹೋಗುತ್ತವೆ. ಇಂತಹ ಸಂದರ್ಭದಲ್ಲಿ ಮಳೆಗಾಲದಲ್ಲಿ ಇಂತಹ ಆಶ್ಚರ್ಯಕರ ಘಟನೆಗಳು ಸಂಭವಿಸುತ್ತದೆ ಎಂದು ಹೇಳಿದ್ದಾರೆ.