alex Certify ತಮಿಳಿನ ಮೊದಲ ಸಲಿಂಗಿ ಪ್ರೇಮದ ಹಾಡಿನ ವಿಡಿಯೋಗೆ ಅಭೂತಪೂರ್ವಕ ಸ್ವಾಗತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮಿಳಿನ ಮೊದಲ ಸಲಿಂಗಿ ಪ್ರೇಮದ ಹಾಡಿನ ವಿಡಿಯೋಗೆ ಅಭೂತಪೂರ್ವಕ ಸ್ವಾಗತ

ತಮಿಳಿನ ಮೊದಲ ಸಲಿಂಗಿಗಳ ಪ್ರೇಮವಿರುವ ಹಾಡಿನ ವಿಡಿಯೋ ಬಿಡುಗಡೆಯಾಗಿದ್ದು, ಜನರು ಅಭೂತಪೂರ್ವಕವಾಗಿ ಸ್ವಾಗತಿಸಿದ್ದಾರೆ. ಪ್ರೀತಿಯಲ್ಲಿರುವ ಇಬ್ಬರು ಮಹಿಳೆಯರನ್ನು ಒಳಗೊಂಡ ಹಾಡಿನ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಪೂರ್ಣ ಹೃದಯದಿಂದ ಸ್ವಾಗತಿಸಿದ್ದಾರೆ.

ತಮಿಳಿನ ಮೊದಲ ಸಲಿಂಗಿ ಹಾಡು ಒಂದು ಹಂತದಲ್ಲಿ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ. ಅನಘಾ ಮತ್ತು ಗೌರಿ ಜಿ. ಕಿಶನ್ ಇದರಲ್ಲಿ ಅಭಿನಯಿಸಿದ್ದಾರೆ. ಗೋವಿಂದ್ ವಸಂತ ಸಂಗೀತ ಸಂಯೋಜಿಸಿದ್ದು, ವಿಜಿ ಬಾಲಸುಬ್ರಮಣ್ಯಂ ಅವರು ವಿಡಿಯೋವನ್ನು ನಿರ್ದೇಶಿಸಿದ್ದಾರೆ. ನವೆಂಬರ್ 22 ರಂದು ಬಿಡುಗಡೆಯಾಗಿರುವ ಈ ವಿಡಿಯೋ ಯೂಟ್ಯೂಬ್‌ನಲ್ಲಿ 22 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

ಟ್ವಿಟ್ಟರ್‌ ನಲ್ಲಿ ಹಂಚಿಕೊಳ್ಳಲಾದ ಈ ಹಾಡಿನ ವಿಡಿಯೋ 24 ಗಂಟೆಗಳಲ್ಲಿ ಒಂದು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಹಾಗೂ ತಮಿಳಿನ ಮೊದಲ ಸಲಿಂಗಿ ಹಾಡು ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಭಾರತದ ಟ್ರೆಂಡಿಂಗ್ ನಲ್ಲಿ ಅಗ್ರಸ್ಥಾನದಲ್ಲಿದೆ.

Trending at No.5 on @YouTubeIndia!
? https://t.co/d5iJWxJZqC#GovindVasantha @madhankarky @VGBALA21 @Arunkrishna_21 @TrendingEntmt @keerthanavnath @kaustubha_media pic.twitter.com/V4LihUUtm0

— Saregama South (@saregamasouth) November 23, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...