
ತಮಿಳಿನ ಮೊದಲ ಸಲಿಂಗಿ ಹಾಡು ಒಂದು ಹಂತದಲ್ಲಿ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ. ಅನಘಾ ಮತ್ತು ಗೌರಿ ಜಿ. ಕಿಶನ್ ಇದರಲ್ಲಿ ಅಭಿನಯಿಸಿದ್ದಾರೆ. ಗೋವಿಂದ್ ವಸಂತ ಸಂಗೀತ ಸಂಯೋಜಿಸಿದ್ದು, ವಿಜಿ ಬಾಲಸುಬ್ರಮಣ್ಯಂ ಅವರು ವಿಡಿಯೋವನ್ನು ನಿರ್ದೇಶಿಸಿದ್ದಾರೆ. ನವೆಂಬರ್ 22 ರಂದು ಬಿಡುಗಡೆಯಾಗಿರುವ ಈ ವಿಡಿಯೋ ಯೂಟ್ಯೂಬ್‌ನಲ್ಲಿ 22 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾದ ಈ ಹಾಡಿನ ವಿಡಿಯೋ 24 ಗಂಟೆಗಳಲ್ಲಿ ಒಂದು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಹಾಗೂ ತಮಿಳಿನ ಮೊದಲ ಸಲಿಂಗಿ ಹಾಡು ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಭಾರತದ ಟ್ರೆಂಡಿಂಗ್ ನಲ್ಲಿ ಅಗ್ರಸ್ಥಾನದಲ್ಲಿದೆ.
https://twitter.com/Happyvillagers1/status/1463759141055303681?ref_src=twsrc%5Etfw%7Ctwcamp%5Etweetembed%7Ctwterm%5E1463759141055303681%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Ffirst-tamil-lgbtq-song-desis-welcome-magizhini-featuring-two-women-in-love-4488446.html