ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ ನಂತರ ಮೊದಲ ಸೆಟ್ ಹೈ ರೆಸಲ್ಯೂಷನ್ ಉಪಗ್ರಹ ಚಿತ್ರಗಳು ರಿಲೀಸ್ ಆಗಿದ್ದು ಇದು ವೈಮಾನಿಕ ದಾಳಿಯ ಸಮಯದಲ್ಲಿ ಹಾನಿಗೊಳಗಾದ ವಿಮಾನ ನಿಲ್ದಾಣಗಳ ಬಳಿ ಇದ್ದ ಅಪಾರ್ಟ್ಮೆಂಟ್ಗಳನ್ನು ತೋರಿಸಿದೆ.
ನಿನ್ನೆ ಖಾರ್ಕಿವ್ ಬಳಿಕ ಚುಹುವಿವ್ ವಿಮಾನ ನಿಲ್ದಾಣದ ಮೇಲೆ ರಷ್ಯಾದ ಬಾಂಬರ್ ಜೆಟ್ಗಳನ್ನು ಗುರಿಯಾಗಿಸಲಾಗಿದೆ. ಸ್ಪೇಸ್ ಕಂಪನಿಯಾದ ಪ್ಲಾನೆಟ್ ಲ್ಯಾಬ್ಸ್ ಈ ಉಪಗ್ರಹ ಚಿತ್ರಗಳನ್ನು ಒದಗಿಸಿದೆ. ಈ ಚಿತ್ರಗಳಲ್ಲಿ ರನ್ ವೇ ಬಳಿಯಲ್ಲಿ ದೊಡ್ಡ ಹೊಗೆ ಆವರಿಸಿರುವುದನ್ನು ಕಾಣಬಹುದಾಗಿದೆ. ಮುಂಜಾನೆ ರಷ್ಯಾದ ವೈಮಾನಿಕ ದಾಳಿಯಿಂದ ರಾಡಾರ್ ಹಾಗೂ ವಾಯು ರಕ್ಷಣಾ ವ್ಯವಸ್ಥೆಯು ಸಂಪೂರ್ಣವಾಗಿ ಹಾಳಾಗಿದೆ.
ಈ ದಾಳಿಯ ಬಳಿಕ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ರಷ್ಯಾ ಏರ್ಸ್ಟ್ರೈಕ್ನಲ್ಲಿ ನಾಗರಿಕ ಅಪಾರ್ಟ್ಮೆಂಟ್ಗಳು ಹಾನಿಗೊಳಗಾಗಿರುವುದನ್ನು ಕಾಣಬಹುದಾಗಿದೆ.
ಖಾರ್ಕಿವ್ ಬಳಿಯ ರಷ್ಯಾದ ವೈಮಾನಿಕ ದಾಳಿಯ ನಂತರ ಚುಹುವಿವ್ ವಿಮಾನ ನಿಲ್ದಾಣದ ಸಮೀಪವಿರುವ ಅಪಾರ್ಟ್ಮೆಂಟ್ನಲ್ಲಿ ಅಗ್ನಿಯ ಕೆನ್ನಾಲಿಗೆಯನ್ನು ಉಪಗ್ರಹ ಚಿತ್ರವು ತೋರಿಸಿದೆ. (ಚಿತ್ರ ಕೃಪೆ : ಇಂಡಿಯಾ ಟುಡೇ)