ದೇಶದ ಅನೇಕ ವಿವಿಐಪಿಗಳ ಭದ್ರತೆಗೆಂದು ಇದೇ ಮೊದಲ ಬಾರಿಗೆ ಮಹಿಳಾ ಕಮಾಂಡೋಗಳನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಜ್ಜುಗೊಳಿಸುತ್ತಿದೆ.
ಮಹಿಳಾ ಸಿಬ್ಬಂದಿಯ ಪಡೆ 10 ವಾರಗಳ ತರಬೇತಿ ಆರಂಭಿಸಿದ್ದು, 33 ಮಹಿಳೆಯರು ಇದರಲ್ಲಿ ಭಾಗಿಯಾಗಿದ್ದಾರೆ. ಭಾರೀ ಕಟ್ಟುನಿಟ್ಟಿನ ಆಯ್ಕೆ ಪ್ರಕ್ರಿಯೆ ಮೂಲಕ ಈ 33 ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. 54 ಮಹಿಳೆಯರ ಪೈಕಿ 33 ಮಂದಿಯನ್ನು ತರಬೇತಿಗೆ ಅಂತಿಮಗೊಳಿಸಲಾಗಿದ್ದು, ಇವರಲ್ಲಿ ಪೇದೆಗಳಿಂದ ಸಬ್-ಇನ್ಸ್‌ಪೆಕ್ಟರ್‌ವರೆಗು ಭಿನ್ನ ಸಾಮರ್ಥ್ಯಗಳಲ್ಲಿ ಕೆಲಸ ನಿರ್ವಹಿಸುವವರಿದ್ದಾರೆ.
ಶಿಕ್ಷಣ ಸಂಸ್ಥೆಗಳಿಗೆ ಶಾಕಿಂಗ್ ನ್ಯೂಸ್: ಸರ್ಕಾರದ ಸಹಾಯಧನ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಎಕೆ-47 ಬಂದೂಕುಗಳೊಂದಿಗೆ ಸುಸಜ್ಜಿತ ಶಸ್ತ್ರಗಳೊಂದಿಗೆ ಗ್ರೇಟರ್ ನೋಯಿಡಾದಲ್ಲಿರುವ ಕ್ಯಾಂಪಸ್‌ನಲ್ಲಿ ಈ ಮಹಿಳಾ ಕಮಾಂಡೋಗಳು ವಿಶೇಷ ತರಬೇತಿ ಪಡೆಯಲಿದ್ದಾರೆ.
ಮಹಿಳೆಯರ ಆರು ಪ್ಲಟೂನ್‌ಗಳನ್ನು ಸಜ್ಜುಗೊಳಿಸಲು ಕೇಂದ್ರ ಗೃಹ ಸಚಿವಾಲಯದ ಅನುಮತಿ ಪಡೆದ ಬಳಿಕ ಈ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ವಿವಿಐಪಿಗಳ ಭದ್ರತೆಯ ವಿಚಾರದಲ್ಲಿ ವಿಶೇಷ ಭದ್ರತಾ ಪಡೆ(ಎಸ್‌ಪಿಜಿ) ಹಾಗೂ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳ (ಸಿಐಎಸ್‌ಎಫ್) ಮಾದರಿಯನ್ನು ಅನುಸರಿಸುತ್ತಿರುವ ಸಿಆರ್‌ಪಿಎಫ್, ಒಟ್ಟಾರೆ 3.25 ಲಕ್ಷದಷ್ಟು ಇರುವ ತನ್ನ ಸಿಬ್ಬಂದಿ ಬಲದಲ್ಲಿ 6,000ದಷ್ಟು ಮಹಿಳೆಯರನ್ನು ಹೊಂದಿದೆ.
BIG NEWS: ಎಲ್.ಪಿ.ಜಿ. ಸಂಪರ್ಕ ಪಡೆಯೋದು ಇನ್ಮುಂದೆ ಮತ್ತಷ್ಟು ಸುಲಭ – ಮಿಸ್ಡ್ ಕಾಲ್ ಕೊಟ್ಟರೆ ಸಾಕು ಮನೆಗೆ ಬರುತ್ತೆ ಸಿಲಿಂಡರ್
ಮಹಿಳೆಯರ ಆರು ಬೆಟಾಲಿಯನ್‌ಗಳನ್ನು ಹೊಂದಿರುವ ಸಿಆರ್‌ಪಿಎಫ್, ಸದ್ಯದ ಮಟ್ಟಿಗೆ ಜಮ್ಮು ಮತ್ತು ಕಾಶ್ಮೀರ, ಅಯೋಧ್ಯಾ, ಮಣಿಪುರ, ಅಸ್ಸಾಂ ಹಾಗೂ ದೇಶದ ಇತರೆ ಭಾಗಗಳಲ್ಲಿ ಕರ್ತವ್ಯಕ್ಕೆ ತನ್ನ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಿದೆ. ಇದರೊಂದಿಗೆ ತ್ವರಿತ ಪ್ರತಿಕ್ರಿಯಾ ಪಡೆಯ ಪ್ರತಿಯೊಂದು ಬೆಟಾಲಿಯನ್ ಸಹ 106ರಷ್ಟು ಮಹಿಳಾ ಸಿಬ್ಬಂದಿಯನ್ನು ಹೊಂದಿದೆ.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 242 ಮಹಿಳೆಯರಿಗೆ 241 ಬಸ್ತಾರಿಯಾ ಬಟಾಲಿಯನ್‌ನ ಭಾಗವಾಗಿ ತರಬೇತಿ ನೀಡುತ್ತಿರುವ ಸಿಆರ್‌ಪಿಎಫ್, ನಕ್ಸಲ್ ದಮನಕ್ಕೆ ಬಲ ತುಂಬುವುದರೊಂದಿಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಸಲು ನೋಡುತ್ತಿದೆ.