
ಕಲಬುರ್ಗಿ ಹೊರವಲಯದ ಬಬಲಾದ್ ಕ್ರಾಸ್ ಬಳಿ ದರೋಡೆಕೋರರ ಮೇಲೆ ಅಶೋಕನಗರ ಠಾಣೆ ಪೋಲೀಸರು ಫೈರಿಂಗ್ ಮಾಡಿದ್ದು, ಕಳೆದ ರಾತ್ರಿ ಜನರನ್ನು ಬೆದರಿಸಿ ಸುಲಿಗೆ ಮಾಡಿದ ದರೋಡೆಕೋರರನ್ನು ಬಂಧಿಸಲಾಗಿದೆ.
ಕಳೆದ ರಾತ್ರಿ ಜನರನ್ನು ಬೆದರಿಸಿ ಹಣ ನಾಲ್ವರ ತಂಡ ಹಣ ದೋಚಿತ್ತು. ಬಂಧಿಸಲು ತೆರಳಿದ್ದ ವೇಳೆ ಘಟನೆ ನಡೆದಿದೆ. ಸ್ಥಳೀಯರು ಇಬ್ಬರು ದರೋಡೆಕೋರರನ್ನು ಹಿಡಿದಿದ್ದರು. ಪರಾರಿಯಾಗಿದ್ದ ಮತ್ತಿಬ್ಬರನ್ನು ಹಿಡಿಯಲು ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆಯೇ ದಾಳಿ ಮಾಡಿ ಪರಾರಿಯಾಗಲು ದರೋಡೆಕೋರರು ಯತ್ನಿಸಿದ್ದು, ಪ್ರಾಣರಕ್ಷಣೆಗಾಗಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ. ಗಾಯಾಳುಗಳನ್ನು ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.