alex Certify ಯುವತಿಯನ್ನು ರಕ್ಷಿಸಲು ಹೋಗಿ ಬೇಸ್ತು ಬಿದ್ದ ಅಗ್ನಿಶಾಮಕ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿಯನ್ನು ರಕ್ಷಿಸಲು ಹೋಗಿ ಬೇಸ್ತು ಬಿದ್ದ ಅಗ್ನಿಶಾಮಕ ಸಿಬ್ಬಂದಿ

ಯುವತಿಯೊಬ್ಬರು ಅಪಾಯದ ಸ್ಥಿತಿಯಲ್ಲಿದ್ದಾರೆ, ಕೂಡಲೇ ಬಂದು ಕಾಪಾಡಿ ಎಂದು ದಾರಿಹೋಕರೊಬ್ಬರು ಅಗ್ನಿಶಾಮಕ ದಳಕ್ಕೆ ಕರೆ ಮಾಡುತ್ತಾರೆ, ತುರ್ತು ಸ್ಪಂದನೆ ನೀಡಿದ ತಂಡ ಸ್ಥಳದಲ್ಲಿ ನೋಡಿದರೆ ಆಘಾತ ಕಾದಿತ್ತು. ಅಲ್ಲಿ ಯುವತಿಯೇ ಇರಲಿಲ್ಲ. ಹಾಗೆಂದು ಅದು ಫೇಕ್ ಕಾಲ್ ಆಗಿರಲಿಲ್ಲ.

ಈ ಘಟನೆ ನಡೆದಿದ್ದು ಕ್ಯಾಲಿಫೋರ್ನಿಯಾದಲ್ಲಿ. ಅಲ್ಲಿನ
ಸಾಂತಾ ಬಾರ್ಬರಾದಲ್ಲಿರುವ ಹೋಪ್ ರಾಂಚ್ ಬೀಚ್
ಬಂಡೆಯ ಮೇಲೆ ‘ಯುವತಿ’ ನೇತಾಡುತ್ತಿದ್ದಾಳೆ, ಆಕೆಯನ್ನು ರಕ್ಷಿಸಿ ಎಂದು ದಾರಿಹೋಕರು 911 ಗೆ ಕರೆ ಮಾಡಿ ತಿಳಿಸಿದರು.

ಬದುಕು ಕಟ್ಟಿಕೊಟ್ಟ ಪಕ್ಷದ ಬಗ್ಗೆ ‘ಸಿದ್ಧಹಸ್ತ’ರ ಫರ್ಮಾನು: ಸಿದ್ಧರಾಮಯ್ಯ ವಿರುದ್ಧ ಕುಮಾರಸ್ವಾಮಿ ಟ್ವೀಟ್ ಬಾಣ

ತಕ್ಷಣವೇ ರಕ್ಷಣಾ ತಂಡ ಅಲ್ಲಿಗಾಗಮಿಸಿತು. ಆ ಯುವತಿ ರಕ್ಷಿಸಬೇಕೆಂದು ತಯಾರಿ ನಡೆಸಿದ್ದಾಗ ಆ ತಂಡಕ್ಕೆ ಅಚ್ಚರಿ ಕಾದಿತ್ತು. ಅಲ್ಲಿ ಯುವತಿ ಇರಲಿಲ್ಲ, ಬದಲಿಗೆ ಯುವತಿಯನ್ನು ಹೋಲುವ ಪ್ರತಿಕೃತಿ ಕಾಣಿಸಿದೆ. ಕೆಂಪು ಬಟ್ಟೆತೊಟ್ಟ ಆ ಪ್ರತಿಕೃತಿ ಅಪಾಯದಲ್ಲಿ ಸಿಲುಕಿದ ಯುವತಿಯಂತೆ ಕಾಣಿಸಿದೆ.

ರಕ್ಷಣಾ ತಂಡ ಯುಟಿಲಿಟಿ ಟೆರೈನ್ ವಾಹನಗಳು, ಅಗ್ನಿಶಾಮಕ ವಾಹನ ಮತ್ತು ಡ್ರೋನ್ ಅನ್ನು ಹೊಂದಿ ಕಾರ್ಯಾಚರಣೆ ಆರಂಭಿಸುವ ಮೊದಲು ಥರ್ಮಲ್ ಚೆಕ್ ಅನ್ನು ನಡೆಸಿತು, ಇದರಲ್ಲಿ “ದೇಹ” ದಿಂದ ಹೊರಹೊಮ್ಮುವ ಶಾಖವನ್ನು ಗಮನಿಸಲಾಯಿತು. ಆಗ ಅದು ಮನುಷ್ಯರಲ್ಲ ಗೊಂಬೆ ಎಂಬುದು ಖಾತ್ರಿಯಾಯಿತು. ಚಿತ್ರ ತಂಡ ಬಳಸಿದ ಪ್ರತಿಕೃತಿಯಾಗಿತ್ತು.

ಅದೇ ಫೋಟೋವನ್ನು ಮಾಹಿತಿ ಅಧಿಕಾರಿಯು ಟ್ವೀಟ್‌ನೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ, “Better to call than not!” ಎಂದು ಸಂದೇಶಕೂಡ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...