ನಮ್ಮ ದೇಶದಲ್ಲಿ ಆಯುರ್ವೇದ, ಹೋಮಿಯೋಪತಿ, ಅಲೋಪತಿ, ವ್ಯಾಯಾವ, ಯೋಗ ಹೀಗೆ ಹಲವು ರೀತಿಯ ಚಿಕಿತ್ಸೆಗಳ ಮೂಲಕ ರೋಗಗಳನ್ನು ನಿವಾರಿಸುತ್ತಾರೆ. ಆದರೆ ಇಲ್ಲೊಬ್ಬ ವೈದ್ಯನಿದ್ದಾನೆ. ಇವನು ಎಲ್ಲಿ ನೋವಾಗಿದೆಯೋ ಅಲ್ಲಿ ಬೆಂಕಿ ಹಚ್ಚಿ ನೋವನ್ನು ಶಮನಗೊಳಿಸುತ್ತಾನೆ. ಇವನದು ಫೈರ್ ಟ್ರೀಟ್ಮೆಂಟ್!
ಈ ಚಿಕಿತ್ಸೆಯ ಹೆಸರು ‘ಫೈರ್ ಥೆರಫಿ’ ಈ ಚಿಕಿತ್ಸೆಯನ್ನು ಕೊಡುವ ಝಾಂಗ್ ಫೆಂಗಾವೋ ಅವರು. ಈ ಚಿಕಿತ್ಸೆ ಮಾನವ ಇತಿಹಾಸದ 4ನೇ ಕ್ರಾಂತಿ ಎಂದು ಹೇಳುತ್ತಾರೆ. ಈ ಚಿಕಿತ್ಸೆಯಿಂದ ವಾಸಿಯಾಗದೇ ಇರುವಂತ ಅನೇಕ ಗಂಭೀರ ಖಾಯಿಲೆಗಳು ಗುಣವಾಗುತ್ತದೆಯಂತೆ. ಅಷ್ಟೇ ಅಲ್ಲದೆ ಇದರಿಂದ ಅಜೀರ್ಣ, ಡಿಪ್ರೆಶನ್, ಒತ್ತಡ, ಬಂಜೆತನ, ಕ್ಯಾನ್ಸರ್ ಗಳು ಕೂಡ ಕಡಿಮೆಯಾಗುತ್ತವೆಯಂತೆ, ಈ ಥೆರಪಿ ಪ್ರಾಚೀನ ಚೀನಾದ ನಂಬಿಕೆಗಳ ಆಧಾರವಾಗಿದೆ.
ಈ ಸಿಂಪಲ್ ಟ್ರಿಕ್ ಬಳಸಿದರೆ ʼಮಗ್ಗಿʼ ಸಲೀಸು
ಫೈರ್ ಥೆರಪಿಯಲ್ಲಿ ಮೊದಲು ರೋಗಿಯ ಹೊಟ್ಟೆಗೆ ಗಿಡಮೂಲಿಕೆಗಳ ಲೇಹ್ಯವನ್ನು ಹಚ್ಚುತ್ತಾರೆ. ನಂತರ ಹೊಟ್ಟೆಯನ್ನು ಒಂದು ಟವೆಲ್ ನಿಂದ ಮುಚ್ಚಲಾಗುತ್ತದೆ. ಆಮೇಲೆ ಟವೆಲ್ ಮೇಲೆ ನೀರನ್ನು ಚಿಮುಕಿಸಿ, ರೋಗಿಯ ಹೊಟ್ಟೆಯ ಮೇಲೆ ಬೆಂಕಿಯನ್ನು ಹಚ್ಚಲಾಗುತ್ತದೆ.
ಚೀನಾದಲ್ಲಿ ಈ ಬೆಂಕಿ ಚಿಕಿತ್ಸೆ ಎಷ್ಟೇ ಪ್ರಸಿದ್ಧಿಯಾದರೂ ಇದರ ಬಗ್ಗೆ ಅನೇಕ ಸವಾಲುಗಳು ಕೂಡ ಎದುರಾಗಿವೆ. ಈ ಥೆರಫಿಯನ್ನು ಯಾರು ಮಾಡುತ್ತಾರೋ ಅವರ ಬಳಿ ಯಾವುದೇ ಸರ್ಟಿಫಿಕೇಟ್ ಇರುವುದಿಲ್ಲ. ಯಾವ ನಕಲಿ ವೈದ್ಯ ಬೇಕಾದರೂ ಈ ಚಿಕಿತ್ಸೆಯನ್ನು ಕೊಡಬಹುದು. ಇದರಿಂದ ಅನೇಕ ರೋಗಿಗಳು ಗಾಯಗೊಂಡಿದ್ದಾರೆ. ಅನೇಕ ರೋಗಿಗಳ ಶರೀರ ಸುಟ್ಟು ಹೋಗಿದೆ.
ರಾತ್ರಿ ಬೀಳುವ ಭಯಾನಕ ಕನಸು ನೆಮ್ಮದಿ ಹಾಳು ಮಾಡಿದ್ಯಾ….? ಇಲ್ಲಿದೆ ಪರಿಹಾರ
ಇದರ ಕುರಿತು ಮಾತನಾಡುವ ಝಾಂಗ್ ಫೆಂಗಾವೋ ಅವರು, ಸರಿಯಾಗಿ ತಿಳಿದುಕೊಳ್ಳದೇ ಈ ಚಿಕಿತ್ಸೆಯನ್ನು ಮಾಡುವುದರಿಂದ ಅಂತಹ ಅವಘಡಗಳು ಸಂಭವಿಸುತ್ತವೆ. ನಾನು ಈ ಥೆರಫಿಯನ್ನು ನೂರಾರು ಜನರಿಗೆ ಹೇಳಿಕೊಟ್ಟಿದ್ದೇನೆ. ಸಾವಿರಾರು ಜನರಿಗೆ ಇದರ ಮೂಲಕವೇ ಚಿಕಿತ್ಸೆ ನೀಡಿದ್ದೇನೆ. ಎಲ್ಲರೂ ಗುಣಮುಖರಾಗಿದ್ದಾರೆ ಎನ್ನುತ್ತಾರೆ.