alex Certify BREAKING : ಗುಜರಾತ್ ನ ಹುಮ್ಸಫರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ : ತಪ್ಪಿದ ಭಾರಿ ದುರಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಗುಜರಾತ್ ನ ಹುಮ್ಸಫರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ : ತಪ್ಪಿದ ಭಾರಿ ದುರಂತ

ಸೂರತ್: ಗುಜರಾತ್ ನ ವಲ್ಸಾದ್ ನ ಹುಮ್ಸಫರ್ ಎಕ್ಸ್ ಪ್ರೆಸ್ ರೈಲಿನಲ್ಲಿ (Train)  ಶನಿವಾರ ಬೆಂಕಿ ಕಾಣಿಸಿಕೊಂಡಿದೆ.

ಈ ರೈಲು ಗುಜರಾತ್ ತಿರುಚಿರಾಪಳ್ಳಿ ಮತ್ತು ಶ್ರೀ ಗಂಗಾನಗರ ನಡುವೆ ಚಲಿಸುತ್ತಿತ್ತು. ಬೆಂಕಿ ತಗುಲಿದ ಕೂಡಲೇ ರೈಲನ್ನು ನಿಲ್ಲಿಸಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ರೈಲಿನಿಂದ ಕೆಳಗೆ ಇಳಿಸಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವಲ್ಸಾದ್ ಮೂಲಕ ಹಾದುಹೋಗುವಾಗ ತಿರುಚಿರಾಪಳ್ಳಿ ಜಂಕ್ಷನ್ನಿಂದ ಶ್ರೀ ಗಂಗಾನಗರ ಜಂಕ್ಷನ್ಗೆ ಹೋಗುವ ರೈಲು ಸಂಖ್ಯೆ 22498 ರ ಪವರ್ ಕಾರ್ / ಬ್ರೇಕ್ ವ್ಯಾನ್ ಬೋಗಿಯಲ್ಲಿ ಬೆಂಕಿ ಮತ್ತು ಹೊಗೆ ಕಂಡುಬಂದಿದೆ. ಪಕ್ಕದ ಬೋಗಿಯಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ಪಶ್ಚಿಮ ರೈಲ್ವೆಯ ಸಿಪಿಆರ್ಒ ಸುಮಿತ್ ಠಾಕೂರ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...