ಟಿ ಸಿರೀಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಭೂಷಣ್ ಕುಮಾರ್ ವಿರುದ್ಧ ಅಂಧೇರಿಯ ಡಿ ಎನ್ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ತಮ್ಮ ಕಂಪನಿಯಲ್ಲಿ ಕೆಲಸ ಕೊಡಿಸೋದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ನಲ್ಲಿ 30 ವರ್ಷದ ಮಹಿಳೆ ಸೆಪ್ಟೆಂಬರ್ 2017ರಿಂದ ಕಳೆದ ವರ್ಷದವರೆಗೂ ಭೂಷಣ್ ಕುಮಾರ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅಲ್ಲದೇ ಈ ವಿಚಾರವನ್ನ ಎಲ್ಲಿ ಆದರೂ ಬಾಯ್ಬಿಟ್ಟಲ್ಲಿ ಸಾಯಿಸೋದಾಗಿ ಜೀವ ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ.
ದೂರು ದಾಖಲಾದ ಬಗ್ಗೆ ಅಧಿಕೃತ ಮಾಹಿತಿ ನೀಡಿದ ಮುಂಬೈ ಹಿರಿಯ ಪೊಲೀಸ್ ಅಧಿಕಾರಿ, ಐಪಿಸಿ ಸೆಕ್ಷನ್ 376, 420 ಹಾಗೂ 506ರ ಅಡಿಯಲ್ಲಿ ಡಿ ಎನ್ ನಗರ ಪೊಲೀಸ್ ಠಾಣೆಯಲ್ಲಿ ಭೂಷಣ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.
2018ರಲ್ಲಿ ದೇಶದಲ್ಲಿ ಮೀಟೂ ಅಭಿಯಾನ ಶುರುವಾದಾಗಲೂ ಸಹ ಭೂಷಣ್ ಕುಮಾರ್ ವಿರುದ್ಧ ಅತ್ಯಾಚಾರ ಆರೋಪಗಳು ಕೇಳಿ ಬಂದಿದ್ದವು. ಆದರೆ ಆಗ ಆರೋಪ ಮಾಡಿದ್ದ ಮಹಿಳೆಯೇ ಈಗ ಪ್ರಕರಣ ದಾಖಲಿಸಿದ್ದಾರಾ ಅನ್ನೋದು ಖಚಿತವಾಗಿಲ್ಲ.