ನವದೆಹಲಿ: ಒನ್ ನೇಷನ್ ಒನ್ ರೇಷನ್ ಕಾರ್ಡ್ ಸೇರಿದಂತೆ 4 ಸುಧಾರಣೆಗಳ ಜಾರಿಗೆ ಹಣಕಾಸು ಸಚಿವಾಲಯ ರಾಜ್ಯಗಳಿಗೆ ಫೆಬ್ರವರಿ 15 ರ ಗಡುವು ನೀಡಲಾಗಿದೆ.
ನಾನಾ ಇಲಾಖೆಗಳಲ್ಲಿ ನಾಗರಿಕರ ಕೇಂದ್ರಿತ ಸುಧಾರಣೆಗಳನ್ನು ಪೂರ್ಣಗೊಳಿಸಲು ಹಣಕಾಸು ಇಲಾಖೆಯಿಂದ ನೋಡಲ್ ಸಚಿವಾಲಯದ ಶಿಫಾರಸುಗಳನ್ನು 2021 ರ ಫೆಬ್ರವರಿ 15 ರೊಳಗೆ ಸ್ವೀಕರಿಸಿದಲ್ಲಿ ಸುಧಾರಣೆ ಸಂಬಂಧಿತ ಪ್ರಯೋಜನ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.
ಒನ್ ನೇಷನ್ ಒನ್ ರೇಷನ್ ಕಾರ್ಡ್ ಅನುಷ್ಠಾನ, ವ್ಯಾಪಾರ ಸುಧಾರಣೆಯ ಸುಲಭ ವ್ಯವಹಾರ, ವಿದ್ಯುತ್ ವಲಯದ ಸುಧಾರಣೆಗಳು, ನಗರ ಸ್ಥಳೀಯ ಸಂಸ್ಥೆ ಸುಧಾರಣೆಗಳು ಇದರಲ್ಲಿ ಒಳಗೊಂಡಿವೆ ಎನ್ನಲಾಗಿದೆ.