ಕ್ಯಾಂಪಸ್‌ನಲ್ಲಿ ಪ್ರೇಮಿಗಳ ದಿನಾಚರಣೆಗೆ ಅವಕಾಶ ನೀಡಿರುವ ಅಧಿಸೂಚನೆ ನಕಲಿ ಎಂದು ಜಾದವ್‌ಪುರ ವಿಶ್ವವಿದ್ಯಾಲಯದ ಪ್ರಾಧಿಕಾರ ಸುತ್ತೋಲೆ ಹೊರಡಿಸಿದೆ.
ವಿಶ್ವವಿದ್ಯಾನಿಲಯವು ಕ್ಯಾಂಪಸ್‌ನಲ್ಲಿ ಪ್ರೇಮಿಗಳ ದಿನಾಚರಣೆಗೆ ಅನುಮತಿ ನೀಡಿದೆ. ವಿದ್ಯಾರ್ಥಿಗಳು ತಮ್ಮನ್ನು ‘ಪ್ರೀತಿಸುವ ಸಂಗಾತಿಗಳನ್ನು’ ಹುಡುಕಿಕೊಳ್ಳಿ ಎಂದು ಶುಕ್ರವಾರ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಂದೇಶವೊಂದು ತಲುಪಿತ್ತು. ಜೊತೆಗೆ ಆ ಸಂದೇಶದಲ್ಲಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಸಹಿ ಸಹ ಇತ್ತು.
ಆಘಾತಕಾರಿ ಸಂಗತಿಯೆಂದರೆ, ವೈರಲ್ ಆಗಿರುವ ನಕಲಿ ಸುತ್ತೋಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ‘ಗೆಳೆಯ’ ಅಥವಾ ‘ಗೆಳತಿ’ಯನ್ನು ಹುಡುಕಲು ಗಡುವು ನೀಡಲಾಗಿದೆ. ಫೆಬ್ರವರಿ 10 ರೊಳಗೆ ಪ್ರತಿಯೊಬ್ಬರೂ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದನ್ನು ನಕಲಿ ನೋಟೀಸ್ ಎಂದಿರುವ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ರಿಜಿಸ್ಟ್ರಾರ್ ಅವರ ಸಹಿ ಫೋರ್ಜರಿಯಾಗಿದೆ ಎಂದು ಸ್ಪಷ್ಟಪಡಿಸಿದೆ.
ಅಚ್ಚರಿಯಾದ್ರೂ ಇದು ನಿಜ…! ಪತ್ನಿಯನ್ನು ಕೊಲ್ಲುವ ಪ್ರಯತ್ನದಲ್ಲಿ ಕೈ ಕತ್ತರಿಸಿಕೊಂಡ ಪತಿಗೆ ಪರಿಹಾರ ನೀಡಿದ ನ್ಯಾಯಾಲಯ
ವಿಶ್ವವಿದ್ಯಾನಿಲಯದ ಅಧಿಕಾರಿಗಳು ನಕಲಿ ಸುತ್ತೋಲೆಯ ಬಗ್ಗೆ ಪೊಲೀಸರು ಮತ್ತು ಸೈಬರ್ ಕ್ರೈಮ್‌ಗೆ ಮಾಹಿತಿ ನೀಡಿದ್ದು, ರಿಜಿಸ್ಟ್ರಾರ್ ಅವರು ವಿಸಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ತುಂಬಾ ದುರದೃಷ್ಟಕರ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ನಾವು ಕೂಡ ವಿಚಾರಣೆ ಮಾಡುತ್ತೇವೆ. ಇಂತಾ ನಡವಳಿಕೆಯನ್ನು ಸಹಿಸುವುದಿಲ್ಲ ಎಂದು ರಿಜಿಸ್ಟ್ರಾರ್ ಮಂಜು ಬಸು ಬೇಸರ ವ್ಯಕ್ತಪಡಿಸಿದ್ದಾರೆ.