alex Certify ಅಚ್ಚರಿಯಾದ್ರೂ ಇದು ನಿಜ…! ಪತ್ನಿಯನ್ನು ಕೊಲ್ಲುವ ಪ್ರಯತ್ನದಲ್ಲಿ ಕೈ ಕತ್ತರಿಸಿಕೊಂಡ ಪತಿಗೆ ಪರಿಹಾರ ನೀಡಿದ ನ್ಯಾಯಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಯಾದ್ರೂ ಇದು ನಿಜ…! ಪತ್ನಿಯನ್ನು ಕೊಲ್ಲುವ ಪ್ರಯತ್ನದಲ್ಲಿ ಕೈ ಕತ್ತರಿಸಿಕೊಂಡ ಪತಿಗೆ ಪರಿಹಾರ ನೀಡಿದ ನ್ಯಾಯಾಲಯ

ತನ್ನ ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸುತ್ತಿರುವಾಗ ಆಕಸ್ಮಿಕವಾಗಿ ತನ್ನ ಕೈಯನ್ನು ಕತ್ತರಿಸಿಕೊಂಡ ವ್ಯಕ್ತಿಗೆ, £ 17,500 ಅಂದರೆ 17,68, 364 ರೂ. ಪರಿಹಾರವನ್ನು ನೀಡಲಾಗಿದೆ. 36 ವರ್ಷದ ಡೊರಿನೆಲ್ ಕೊಜಾನು ಎಂದು ಗುರುತಿಸಲಾದ ವ್ಯಕ್ತಿ ಡಿಸೆಂಬರ್ 2015 ರಲ್ಲಿ ತನ್ನ ಹೆಂಡತಿಯನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಕ್ಕಾಗಿ 11 ವರ್ಷಗಳ ಕಾಲ ಜೈಲಿನಲ್ಲಿದ್ದನು.

ಕುಡಿದ ಅಮಲಿನಲ್ಲಿ ಕೊಜಾನು ಎಂಟು ಇಂಚಿನ ಬ್ಲೇಡ್ ಸಹಾಯದಿಂದ ತನ್ನ ಮಾಜಿ ಪತ್ನಿ ಡೇನಿಯಲಾ (35) ಎಂಬುವರನ್ನು ಬಲವಾಗಿ ಇರಿದಿದ್ದ. ಚಾಕು ಬಲ ಸ್ತನದ ಮೂಲಕ ಹೋಗಿ ಎರಡು ಪಕ್ಕೆಲುಬುಗಳ ಮೂಲಕ ಹಾದುಹೋಗಿದ್ದರಿಂದ ಆಕೆ ತೀವ್ರವಾಗಿ ಗಾಯಗೊಂಡಿದ್ದರು.

ಅದು ಅವರ ಶ್ವಾಸಕೋಶ ಮತ್ತು ಯಕೃತ್ತಿಗೆ ಹೋಗಿದೆ. ದಾಳಿಯ ನಂತರ ಅವರು ಸುಮಾರು ನಾಲ್ಕು ತಿಂಗಳುಗಳ ಕಾಲ ಆಸ್ಪತ್ರೆಯಲ್ಲೇ ಕಳೆದರು. ತನ್ನ ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸುತ್ತಿರುವಾಗ, ಕೊಜಾನು ಅವಳನ್ನು ತುಂಬಾ ಬಲವಾಗಿ ಇರಿದಿದ್ದ.‌ ಇದರಿಂದ ಅವನ ಬಲಗೈನ ಎರಡು ಬೆರಳುಗಳಲ್ಲಿ ಆಳವಾದ ಗಾಯವಾಗಿತ್ತು. ಹೀಗಾಗಿ ಇದಕ್ಕೆ ತಕ್ಷಣದ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಆದರೆ ಪೊಲೀಸರು ಸರಿಯಾದ ಚಿಕಿತ್ಸೆಗೆ ಒಳಪಡಿಸಲಿಲ್ಲ ಇದರಿಂದ ನನ್ನ ಬಲಗೈ ಸ್ವಾಧೀನ ಕಳೆದುಕೊಂಡಿದ್ದೇನೆಂದು ಕೊಜಾನು ಎನ್‌ಎಚ್‌ಎಸ್ ವಿರುದ್ಧ ಪರಿಹಾರ ನೀಡಿ ಎಂದು ಅರ್ಜಿ ಸಲ್ಲಿಸಿದ್ದ.

ಈ ಪ್ರಕರಣ ಸಂಬಂಧ 2021ರ ಮೇ ತಿಂಗಳಲ್ಲಿ ನಾರ್ವಿಚ್ ಕೌಂಟಿ ನ್ಯಾಯಾಲಯದಲ್ಲಿ 8.5ಸಾವಿರ ಪೌಂಡ್ಸ್ ಪರಿಹಾರ ಘೋಷಿಸಲಾಯ್ತು. ಆದರೆ ಇದು ಕೊಜಾನು ಚಿಕಿತ್ಸೆಗೆ ಆಗಲಿ, ಜೀವನ ಸಾಗಿಸಲು ಆಗಿ ಸಾಲುವುದಿಲ್ಲ ಎಂದು ಹೈಕೋರ್ಟ್ ಮೊರೆ ಹೋಗಲಾಯ್ತು. ಇಲ್ಲಿ ನ್ಯಾಯಾಧೀಶ, ಜಸ್ಟಿಸ್ ರಿಚಿ ಅವರು ಪರಿಹಾರವನ್ನು £ 17,500 ಗೆ ಹೆಚ್ಚಿಸಬೇಕೆಂದು ತೀರ್ಪು ನೀಡಿದರು. ಸಿವಿಲ್ ಆ್ಯಕ್ಷನ್ ಗೆಲ್ಲಲು ಹಕ್ಕುದಾರರು (ಕೊಜಾನು) ಹೇಗೆ ಗಾಯಗೊಂಡರು ಎಂಬುದನ್ನು ಸಾಬೀತುಪಡಿಸುವ ಅಗತ್ಯವಿಲ್ಲ. ಅವರು ಜೈಲಿಗೆ ಸೇರುವ ಮೊದಲು ಗಾಯಗೊಂಡಿದ್ದರು. ಆ ಸಮಯದಲ್ಲಿ ಅವರು ಅಪರಾಧಿ ಎಂದು ಸಾಬೀತಾಗಿರಲಿಲ್ಲ. ಅವರು ಗ್ಯಾಂಗ್ ವಾರ್‌ಫೇರ್‌ನಲ್ಲಿ ಗಾಯಗೊಂಡರೋ, ಅವರ ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸುವಾಗ ಗಾಯಗೊಂಡರೋರೊ ಅಥವಾ ಬೀನ್ಸ್ ಟಿನ್ ತೆರೆಯುವಾಗ ಗಾಯಗೊಂಡರೊ ಅದು ಮುಖ್ಯವಲ್ಲ. ಆದರೆ ಬೆರಳುಗಳು ಕತ್ತರಿಸಿದ್ದವು ಎಂಬುದು ಮುಖ್ಯ. ಆರೋಗ್ಯ ಸೇವೆ ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ತೀರ್ಪು ನೀಡಿ ಪರಿಹಾರ ಘೋಷಿಸಿದ್ದಾರೆ.

ಕೊಜಾನುಗೆ ಪರಿಹಾರ ನೀಡಿರುವ ಹೈಕೋರ್ಟ್ ತೀರ್ಪನ್ನು ಅವನಿಂದ ಹಲ್ಲೆಗೊಳಗಾದ ಡೇನಿಯೆಲ್ಲಾ ಖಂಡಿಸಿದ್ದಾರೆ. ಈ ನಿರ್ಧಾರದಿಂದ ಕ್ರೋಧಗೊಂಡಿರುವ, ಅವರು ಇದು ಅವಮಾನಕರ ಮತ್ತು ಅಸಹ್ಯಕರವಾಗಿದೆ. ಈ ವ್ಯಕ್ತಿ ನನ್ನನ್ನು ಕೊಲ್ಲಲು ಪ್ರಯತ್ನಿಸಿದ. ನನ್ನ ಮನೆಯನ್ನು ದುರ್ಬಳಕೆ ಮಾಡಿಕೊಂಡ, ನನಗೆ ಹಿಂಸೆ ನೀಡಿದ. ನನಗಾದ ಹಲ್ಲೆಗೆ ಇದುವರೆಗು, ನಾನು ಒಂದು ಪೈಸೆಯನ್ನೂ ಸ್ವೀಕರಿಸಿಲ್ಲ. ಹೀಗಿರುವಾಗ ಅವರಿಗೆ ಕೋಟ್ಯಾಂತರ ಬಹುಮಾನ ನೀಡಲಾಗುತ್ತಿದೆ. ನಾನು ಸುಮಾರು ನಾಲ್ಕು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದೆ. ನನ್ನ ಮೇಲೆ ಹಲ್ಲೆ ನಡೆಸುವಾಗ ಆತನಿಗಾದ ಗಾಯಕ್ಕೆ ಪುರಸ್ಕಾರ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...