ಸೆಕೆಂಡ್ ಲಾಕ್ಡೌನ್ ಮುಗಿದ ಬಳಿಕ ಚಿತ್ರಮಂದಿರಗಳು ಭಾಗಶಃ ತೆರೆದಿವೆ. ಆದರೆ ಸಿನಿಮಾಗಳನ್ನು ರಿಲೀಸ್ ಮಾಡಿದರೆ ಜನರು ಸಿನಿಮಾ ವೀಕ್ಷಿಸಲು ಥಿಯೇಟರ್ನತ್ತ ಧಾವಿಸುತ್ತಾರೋ ಇಲ್ಲವೋ ಎಂಬ ಭಯ ನಿರ್ಮಾಪಕರಲ್ಲಿದೆ. ಹೀಗಾಗಿ ಅನೇಕರು ಸಿನಿಮಾಗಳು ಸಂಪೂರ್ಣ ತಯಾರಾಗಿದ್ದರೂ ಸಹ ರಿಲೀಸ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಆದರೆ ಈ ಎಲ್ಲಾ ಭಯಗಳಿಗೆ ಮುಲಾಮು ಎಂಬಂತೆ ಥಿಯೇಟರ್ನಲ್ಲಿ ತೆರೆ ಕಂಡ ಬಂಗಾಳಿಯ ಎರಡು ಸಿನಿಮಾಗಳು ಕೆಲ ಸಿನಿಮಾ ಹಾಲ್ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಟಾನು ಘೋಷ್ರ ಬಿನಿಸುತೋಯ್ ಹಾಗೂ ಬಿರ್ಸಾ ದಾಸ್ಗುಪ್ತಾರ ಮುಖೋಶ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಅಟಾನು, ಜನರು ಥಿಯೇಟರ್ನತ್ತ ಮುಖ ಮಾಡಿರೋದನ್ನು ಕಂಡು ತುಂಬಾನೇ ಸಂತೋಷವಾಗುತ್ತಿದೆ. ಸಿನಿಮಾಗಳನ್ನು ವೀಕ್ಷಿಸಲು ಸಾಕಷ್ಟು ಬೇರೆ ವೇದಿಕೆಗಳು ಇದ್ದರೂ ಸಹ ಥಿಯೇಟರ್ನಲ್ಲಿ ಸಿಕ್ಕ ಮಜಾ ಬೇರೆಡೆ ಸಿಗಲು ಸಾಧ್ಯವೇ ಇಲ್ಲ. ಹೀಗಾಗಿ ಜನರು ಥಿಯೇಟರ್ನತ್ತ ಬರ್ತಿದ್ದಾರೆ, ಇದರಿಂದ ನನಗೆ ಸಂತೋಷವಾಗಿದೆ ಎಂದು ಹೇಳಿದ್ರು.
ಬಿರ್ಸಾ ಕೂಡ ಇದೇ ವಿಚಾರವಾಗಿ ಮಾತನಾಡಿದ್ದು, ಕಳೆದ ಒಂದೂವರೆ ವರ್ಷದ ಅವಧಿಯು ನನ್ನಂತ ಅನೇಕರ ಪಾಲಿಗೆ ಕಷ್ಟದ ಸಮಯವಾಗಿದೆ. ನಾವೆಲ್ಲ ಥಿಯೇಟರ್ ಪುನಾರಂಭವಾಗೋದನ್ನೇ ಕಾಯುತ್ತಿದ್ದೆವು. ಪಶ್ಚಿಮ ಬಂಗಾಳದಲ್ಲಿ ಚಿತ್ರಮಂದಿರಗಳು ಪುನಾರಂಭಗೊಂಡಿದೆ.
ಅದೃಷ್ಟವಶಾತ್ ಪ್ರೇಕ್ಷಕರು ಕೂಡ ಚಿತ್ರಮಂದಿರಗಳತ್ತ ಬರ್ತಿದ್ದಾರೆ. ಮೊದಲ ವಾರದಲ್ಲಿ ಪ್ರೇಕ್ಷಕರ ಸಂಖ್ಯೆ ತೃಪ್ತಿದಾಯಕವಾಗಿತ್ತು. ಆದರೆ 2ನೇ ವಾರಾಂತ್ಯದಲ್ಲಿ ಈ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಜನರು ಚಿತ್ರಮಂದಿರಗಳಲ್ಲಿ ಸಿನಿಮಾಗಳನ್ನು ಅದರಲ್ಲೂ ವಿಶೇಷವಾಗಿ ಬಂಗಾಳಿ ಸಿನಿಮಾಗಳನ್ನು ನೋಡಲು ಉತ್ಸುಕರಾಗಿದ್ದಾರೆ. ಇಲ್ಲಿಂದ ಮುಂದಿನ ದಿನಗಳು ಶುಭಕರವಾಗಿರಲಿ ಎಂದು ಆಶಿಸುವೆ ಎಂದು ಹೇಳಿದ್ರು.