alex Certify FIFA ವಿಶ್ವಕಪ್: ಅರ್ಜೆಂಟೈನಾ ವಿರುದ್ಧ ಗೆಲುವು ಸಾಧಿಸಿದ ಸೌದಿ ಆಟಗಾರರಿಗೆ ಬಂಪರ್; ಪ್ರತಿಯೊಬ್ಬರಿಗೂ ಸಿಗಲಿದೆ ಐಷಾರಾಮಿ ರೋಲ್ಸ್ ರಾಯ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

FIFA ವಿಶ್ವಕಪ್: ಅರ್ಜೆಂಟೈನಾ ವಿರುದ್ಧ ಗೆಲುವು ಸಾಧಿಸಿದ ಸೌದಿ ಆಟಗಾರರಿಗೆ ಬಂಪರ್; ಪ್ರತಿಯೊಬ್ಬರಿಗೂ ಸಿಗಲಿದೆ ಐಷಾರಾಮಿ ರೋಲ್ಸ್ ರಾಯ್

ಕತಾರ್ ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ನಲ್ಲಿ ಸೌದಿ ಅರೇಬಿಯಾ ಆಟಗಾರರು ಅದ್ಭುತ ಸಾಧನೆ ಮಾಡಿದ್ದಾರೆ. ಅರ್ಜೆಂಟೈನಾ ವಿರುದ್ಧ ನಡೆದ ಗ್ರೂಪ್ ಸಿ ಪಂದ್ಯದಲ್ಲಿ 2-1 ಅಂತರಗಳಿಂದ ಜಯ ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಅವರ ಈ ಗೆಲುವು ದೇಶದ ಜನತೆಯನ್ನು ಸಂತಸದ ಸಾಗರದಲ್ಲಿ ತೇಲಿಸಿದ್ದು, ಇದರ ಸಂಭ್ರಮಾಚರಣೆಗಾಗಿ ಮೂರು ದಿನಗಳ ರಾಷ್ಟ್ರೀಯ ರಜಾದಿನವನ್ನು ಘೋಷಿಸಲಾಗಿತ್ತು. ಇದೀಗ ಸೌದಿ ರಾಜಕುಮಾರ ಇತಿಹಾಸ ಸೃಷ್ಟಿಸಿದ ತನ್ನ ದೇಶದ ಫುಟ್ಬಾಲ್ ಆಟಗಾರರಿಗೆ ಬಂಪರ್ ಕೊಡುಗೆಯನ್ನು ನೀಡಲು ಮುಂದಾಗಿದ್ದಾರೆ.

ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಅವರು ಪ್ರತಿಯೊಬ್ಬ ಆಟಗಾರರಿಗೂ ಐಶಾರಾಮಿ ರೋಲ್ಸ್ ರಾಯ್ಸ್ ಕಾರನ್ನು ಕೊಡುಗೆಯಾಗಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬರೋಬ್ಬರಿ 500,000 ಪೌಂಡ್ ಬೆಲೆ ಬಾಳುವ ಈ ವಾಹನ ಗರಿಷ್ಠ 460 hp ಶಕ್ತಿಯನ್ನು ಹೊಂದಿದೆ. ವಿಶ್ವ ಕಪ್ ಮುಗಿದ ಬಳಿಕ ತಮ್ಮ ಮನೆಗೆ ಮರಳುವ ಆಟಗಾರರಿಗೆ ಈ ಕಾರ್ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...