alex Certify 3D ಎಫೆಕ್ಟ್‌ಗೆ ದಂಗಾದ ನೆಟ್ಟಿಗರು; ನಿಬ್ಬೆರಗಾಗಿಸುವ ವಿಡಿಯೋ 44 ಲಕ್ಷ ಬಾರಿ ವೀಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3D ಎಫೆಕ್ಟ್‌ಗೆ ದಂಗಾದ ನೆಟ್ಟಿಗರು; ನಿಬ್ಬೆರಗಾಗಿಸುವ ವಿಡಿಯೋ 44 ಲಕ್ಷ ಬಾರಿ ವೀಕ್ಷಣೆ

ಪೇಪರ್ ಮತ್ತು ಪೆನ್ಸಿಲ್, ಕ್ಯಾನ್ವಾಸ್ ಮತ್ತು ಬ್ರಷ್ ಬಳಸಿ 3D ಚಿತ್ರಗಳನ್ನು ರಚಿಸುವ ಅನೇಕ ಕಲಾವಿದರಿದ್ದಾರೆ. ಅಂಥ ಅನೇಕ 3D ರಚನೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುತ್ತವೆ. ಇವುಗಳ ಪೈಕಿ ಬಹುತೇಕ ಎಲ್ಲವೂ ನಿಬ್ಬೆರಗಾಗುವಂತೆಯೇ ಇರುತ್ತವೆ.

ಇಲ್ಲಿ ಅಂಥದ್ದೇ ಒಂದು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದೇವೆ. ಕಲಾವಿದನೊಬ್ಬ ಗೋಡೆಯೊಳಕ್ಕೆ ಸಣ್ಣ ಬಾಗಿಲನ್ನು ಇಟ್ಟಿರುವಂತೆ ಕಾಣುವ ಕಲೆ ಇದಾಗಿದೆ. ಇದನ್ನು ನೋಡಿದವರು ಬೆರಗಾಗುವುದಂತೂ ಗ್ಯಾರಂಟಿ.

ಈ ವಿಡಿಯೋದಲ್ಲಿ ಗೋಡೆಯ ಮುಂದೆ ಕಲಾವಿದ ದೊಡ್ಡ ಪೆಟ್ಟಿಗೆಯನ್ನು ಇರಿಸುತ್ತಾನೆ. ನಂತರ ಗೋಡೆಗೆ ಇರುವ ಸೇಮ್‌ ಬಣ್ಣವನ್ನೇ ಆ ಪೆಟ್ಟಿಗೆಗೆ ಬಳಿಯುತ್ತಾನೆ. ನಂತರ ನೋಡ ನೋಡುತ್ತಾ ಅದು ಕಣ್ಮರೆಯಾಗುತ್ತದೆ. ಗೋಡೆಗೆ ಫಿಕ್ಸ್‌ ಆಗಿರುವಂತೆ ಕಾಣಿಸುತ್ತದೆ.

ನಂತರ ಗೋಡೆಯನ್ನೇ ಕೊರೆದು ಪೆಟ್ಟಿಗೆಯ ಬಾಗಿಲು ಹೇಗೆ ಬಂತು ಎಂದು ಅಚ್ಚರಿ ಪಡುವ ಹಾಗೆ ಕಾಣಿಸುತ್ತದೆ. ಈ ವೀಡಿಯೊವನ್ನು Twitter ನಲ್ಲಿ @HowThingsWork ಎನ್ನುವವರು ಶೇರ್‌ ಮಾಡಿಕೊಂಡಿದ್ದು, ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ವಿಡಿಯೋವನ್ನು 44 ಲಕ್ಷ ಬಾರಿ ವೀಕ್ಷಿಸಲಾಗಿದೆ.

— H0W_THlNGS_W0RK (@HowThingsWork_) February 13, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...