
ಇಲ್ಲಿ ಅಂಥದ್ದೇ ಒಂದು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದೇವೆ. ಕಲಾವಿದನೊಬ್ಬ ಗೋಡೆಯೊಳಕ್ಕೆ ಸಣ್ಣ ಬಾಗಿಲನ್ನು ಇಟ್ಟಿರುವಂತೆ ಕಾಣುವ ಕಲೆ ಇದಾಗಿದೆ. ಇದನ್ನು ನೋಡಿದವರು ಬೆರಗಾಗುವುದಂತೂ ಗ್ಯಾರಂಟಿ.
ಈ ವಿಡಿಯೋದಲ್ಲಿ ಗೋಡೆಯ ಮುಂದೆ ಕಲಾವಿದ ದೊಡ್ಡ ಪೆಟ್ಟಿಗೆಯನ್ನು ಇರಿಸುತ್ತಾನೆ. ನಂತರ ಗೋಡೆಗೆ ಇರುವ ಸೇಮ್ ಬಣ್ಣವನ್ನೇ ಆ ಪೆಟ್ಟಿಗೆಗೆ ಬಳಿಯುತ್ತಾನೆ. ನಂತರ ನೋಡ ನೋಡುತ್ತಾ ಅದು ಕಣ್ಮರೆಯಾಗುತ್ತದೆ. ಗೋಡೆಗೆ ಫಿಕ್ಸ್ ಆಗಿರುವಂತೆ ಕಾಣಿಸುತ್ತದೆ.
ನಂತರ ಗೋಡೆಯನ್ನೇ ಕೊರೆದು ಪೆಟ್ಟಿಗೆಯ ಬಾಗಿಲು ಹೇಗೆ ಬಂತು ಎಂದು ಅಚ್ಚರಿ ಪಡುವ ಹಾಗೆ ಕಾಣಿಸುತ್ತದೆ. ಈ ವೀಡಿಯೊವನ್ನು Twitter ನಲ್ಲಿ @HowThingsWork ಎನ್ನುವವರು ಶೇರ್ ಮಾಡಿಕೊಂಡಿದ್ದು, ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ವಿಡಿಯೋವನ್ನು 44 ಲಕ್ಷ ಬಾರಿ ವೀಕ್ಷಿಸಲಾಗಿದೆ.