
ಪ್ರಾಣಿಗಳು ತಮ್ಮ ಸಹಜವಾದ ಪರಿಸರದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಚಿನ್ನಾಟಗಳಲ್ಲಿ ತೊಡಗಿರುವ ವಿಡಿಯೋಗಳಿಗೆ ಆನ್ಲೈನ್‌ನಲ್ಲಿ ಭಾರೀ ಬೇಡಿಕೆ ಇದೆ. ಅದರಲ್ಲೂ ಆನೆ ಮರಿಗಳ ತುಂಟಾಟದ ವಿಡಿಯೋಗಳೆಂದರೆ ನೆಟ್ಟಿಗರಿಗೆ ವಿಶೇಷವಾಗಿ ಇಷ್ಟವಾಗುತ್ತದೆ.
ಇದೀಗ ಕೆಲವೇ ಗಂಟೆಗಳ ಹಿಂದೆ ಜನಿಸಿದ ಆನೆ ಮರಿಯೊಂದರ ಚಿತ್ರವೊಂದು ವೈರಲ್ ಆಗಿದೆ. ಈ ಮುದ್ದು ಮರಿ ತನ್ನ ಅಮ್ಮನೊಂದಿಗೆ ಅಡ್ಡಾಡುತ್ತಿರುವ ಫೋಟೋ ನೆಟ್ಟಿಗರಿಗೆ ಸಖತ್ ಇಷ್ಟವಾಗಿಬಿಟ್ಟಿದೆ.
BIG BREAKING: ಒಂದೇ ದಿನದಲ್ಲಿ ಮತ್ತೆ 11,106 ಜನರಲ್ಲಿ ಕೊರೊನಾ ಸೋಂಕು ಹೊಸದಾಗಿ ಪತ್ತೆ; 459 ಜನ ಬಲಿ
ಹುಟ್ಟಿದ ಕೆಲವೇ ಗಂಟೆಗಳಲ್ಲೇ ತನ್ನ ತಾಯಿಗೆ ಮುಂದಿನ ಹಾದಿಯನ್ನು ಈ ಆನೆ ಮರಿ ತೋರುತ್ತಿದೆ. ಈ ಅದ್ಭುತ ಕ್ಷಣದ ದೃಶ್ಯವನ್ನು ಸೆರೆ ಹಿಡಿಯಲಾಗಿದ್ದು, ಕಾನನದ ಹಸಿರಿನ ಹಿನ್ನೆಲೆಯಲ್ಲಿ ತಾಯಿ ಮಗು ಇಬ್ಬರೂ ನಡೆದು ಹೋಗುತ್ತಿರುವುದನ್ನು ಚಿತ್ರದಲ್ಲಿ ನೋಡಬಹುದಾಗಿದೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಈ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. ಪೋಸ್ಟ್ ಮಾಡಿದ ಕೆಲ ಹೊತ್ತಿನಲ್ಲೇ ವೈರಲ್ ಆದ ಈ ಚಿತ್ರಕ್ಕೆ 2,500ಕ್ಕೂ ಹೆಚ್ಚಿನ ಲೈಕ್ಸ್ ಸಿಕ್ಕಿವೆ.