alex Certify 20 ವರ್ಷಗಳ ಕಾಲ ಪ್ರತಿದಿನವೂ ಮಗಳ ವಿಡಿಯೋ ಮಾಡಿದ ತಂದೆ; ಇದಲ್ಲವೇ ಅದ್ಭುತ ಬಾಂಧವ್ಯವೆಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ವರ್ಷಗಳ ಕಾಲ ಪ್ರತಿದಿನವೂ ಮಗಳ ವಿಡಿಯೋ ಮಾಡಿದ ತಂದೆ; ಇದಲ್ಲವೇ ಅದ್ಭುತ ಬಾಂಧವ್ಯವೆಂದ ನೆಟ್ಟಿಗರು

ಚಿಕ್ಕಮಕ್ಕಳು ಹೇಗೆ ಬೆಳೆಯುತ್ತಾರೆ ಎಂದು ಗೊತ್ತೇ ಆಗದಷ್ಟು ವೇಗದಲ್ಲಿ ಬೆಳೆಯುತ್ತಿರುತ್ತಾರೆ. ಈಗಂತೂ ಮಕ್ಕಳ ಫೋಟೋಶೂಟ್​, ವಿಡಿಯೋ ಎಲ್ಲವೂ ತೀರಾ ಮಾಮೂಲು. ಆದರೆ ಇಲ್ಲೊಬ್ಬ ಅಪ್ಪ ಮಾತ್ರ ಸ್ವಲ್ಪ ಭಿನ್ನವಾಗಿ ಆಲೋಚಿಸಿದ್ದಾರೆ. ಅದೇನೆಂದರೆ ಅವರ ಮಗಳಿಗೆ ಈಗ 20 ವರ್ಷ. ಆದರೆ ಹುಟ್ಟಿದಾಗಿನಿಂದಲೂ ಪ್ರತಿದಿನವೂ ಮಗಳ ವಿಡಿಯೋ ಮಾಡುತ್ತಿದ್ದ ಈ ತಂದೆಯ ವಿಡಿಯೋ ಈಗ ವೈರಲ್​ ಆಗಿದ್ದು, ನೆಟ್ಟಿಗರನ್ನು ಅಚ್ಚರಿಗೆ ತಳ್ಳಿದೆ.

ಡಚ್ ನಿರ್ದೇಶಕ ಫ್ರಾನ್ ಹಫ್‌ಮಿಸ್ಟರ್ ಎನ್ನುವವರು ತಮ್ಮ ಮಗಳ 20 ವರ್ಷಗಳ ವಿಡಿಯೋ ಮಾಡಿದ್ದು, ಅದೀಗ ವೈರಲ್​ ಆಗಿದೆ. ಹುಟ್ಟಿದಾಗಿನಿಂದಲೂ ಪ್ರತಿದಿನವೂ ಮಗಳ ವಿಡಿಯೋ ಮಾಡಿದ್ದಾರೆ. ಅದನ್ನು ಫಾಸ್ಟ್​ ಮೂವ್​ಮೆಂಟ್​ನಲ್ಲಿ ಎರಡೂವರೆ ನಿಮಿಷಗಳವರೆಗೆ ಆಗುವಂತೆ ಸಂಪೂರ್ಣ ಚಿತ್ರಣ ತೋರಿಸಿದ್ದಾರೆ. ಪುಟಾಣಿಯಾಗಿದ್ದ ಮಗಳು 20 ವರ್ಷ ದಿನವೂ ಹೇಗೆ ಬೆಳೆದಳು ಎಂದು ವಿಡಿಯೋ ತೋರಿಸುತ್ತದೆ.

ಇದನ್ನು ನೋಡಿದ ಹಲವರು ಹೌದಲ್ವಾ? ಇಂಥದ್ದೊಂದು ವಿಡಿಯೋ ಮಾಡಬೇಕು ಎನ್ನುವುದು ಯಾರ ತಲೆಗೂ ಬಂದಿರುವುದಿಲ್ಲ ಎಂದಿದ್ದಾರೆ. ಅಪ್ಪ-ಮಗಳ ಅದ್ಭುತ ಬಾಂಧವ್ಯಕ್ಕೆ ಇದಕ್ಕಿಂತಲೂ ಬೇರೆ ಸಾಕ್ಷಿ ಬೇಕೆ ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಒಟ್ಟಿನಲ್ಲಿ ಈ ಕುತೂಹಲ ಹಾಗೂ ಅಪರೂಪದ ವಿಡಿಯೋ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...