alex Certify ಶೈಕ್ಷಣಿಕ ಸಾಲದ ಹೊರೆ ತಂದೆಯ ಜೀವ ಕಸಿದರೂ ಛಲ ಬಿಡದೆ ಐಎಎಸ್‌ ಪಾಸಾದ ಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೈಕ್ಷಣಿಕ ಸಾಲದ ಹೊರೆ ತಂದೆಯ ಜೀವ ಕಸಿದರೂ ಛಲ ಬಿಡದೆ ಐಎಎಸ್‌ ಪಾಸಾದ ಮಗಳು

ನೋವಿನ ನಡುವೆಯೂ ಸಮಾಧಾನ ನೀಡುವ ಸುದ್ದಿ ಇದು. ಶೈಕ್ಷಣಿಕ ಸಾಲದ ಹೊರೆ ತಾಳಲಾಗದೆ ಬದುಕು ಕೊನೆಗೊಳಿಸಿದ ಅಪ್ಪನ ಆಸೆಯನ್ನು ಛಲ ಬಿಡದೆ ಈಡೇರಿಸಿದ ಮಗಳ ಸಾಧನೆ ಇದು. ಐಎಎಸ್‌ ಪಾಸಾಗುವ ಪ್ರಯತ್ನದಲ್ಲಿ ಐದು ಸಲ ವಿಫಲವಾದರೂ ಪ್ರಯತ್ನ ಬಿಡಲಿಲ್ಲ ಈಕೆ.

ಹೌದು, ಇದು ತುಮಕೂರು ಜಿಲ್ಲೆಯ ಅರುಣಾ ಎಂ ಅವರ ಯಶೋಗಾಥೆ. ಐವರು ಒಡಹುಟ್ಟಿದವರ ಪೈಕಿ ಅರುಣಾ ಮೂರನೇಯವರು. ಯುಪಿಎಸ್‌ಸಿ 2021ರಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆ ಅರುಣಾ ಪಾಲಿಗೆ ವಯೋಮಿತಿ ಪ್ರಕಾರ ಕೊನೆಯದಾಗಿತ್ತು. ಇದರಲ್ಲಿ ಅವರು ದೇಶಕ್ಕೆ 308ನೇ ರ್ಯಾಂಕ್ ಗಳಿಸಿದರು. ಆರನೇ ಪ್ರಯತ್ನದಲ್ಲಿ ಗೆಲುವಿನ ನಗೆ ಬೀರಿದರು.

ಬಹುತೇಕ ಅಭ್ಯರ್ಥಿಗಳಂತೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂಬುದನ್ನು ಅರುಣಾ ಬಯಸಿರಲಿಲ್ಲ. ಅದು ಗುರಿಯೂ ಆಗಿರಲಿಲ್ಲ. ಸಾಮಾನ್ಯರಂತೆ ಇಂಜಿನಿಯರಿಂಗ್‌ ಪದವಿ ಪಡೆದು ಸಾಮಾನ್ಯ ಉದ್ಯೋಗ ಸೇರಲು ಬಯಸಿದ್ದರು. ಆದರೆ, ಜೀವನದ ಘಟನೆಗಳು ಬದುಕಿನ ಪಥವನ್ನೇ ಬದಲಿಸಿಬಿಟ್ಟವು.

ಉಪನ್ಯಾಸಕರಿಗೆ ಗುಡ್ ನ್ಯೂಸ್: ಸಂಭಾವನೆ ಶೇ.20 ರಷ್ಟು ಹೆಚ್ಚಳ

ಅರುಣಾ ಇಂಜಿನಿಯರಿಂಗ್‌ ಓದುತ್ತಿದ್ದ ಕಾಲಘಟ್ಟ. 2009ರ ಒಂದು ದಿನ ಐದು ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡಿದ ತಂದೆ, ಅವುಗಳನ್ನು ಮರು‌ ಪಾವತಿಸಲಾಗದೆ ಒದ್ದಾಡಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡು ಬಿಟ್ಟರು. ಇದು ಬದುಕಿನ ಮೇಲೆ ಅಗಾಧ ಹೊಡೆತ ನೀಡಿತು. ಆಗ ಇಬ್ಬರು ಹಿರಿಯ ಸಹೋದರಿಯರು ಕುಟುಂಬದ ಹೊಣೆಗಾರಿಕೆ ಹೊತ್ತುಕೊಂಡು ಕೆಲವು ವರ್ಷ ಕೆಲಸ ಮಾಡಲು ಒಪ್ಪಿಕೊಂಡರು. ಹೆಣ್ಣು ಮಕ್ಕಳು ಸ್ವತಂತ್ರವಾಗಿರಬೇಕು. ಯುಪಿಎಸ್‌ಸಿ ಪರೀಕ್ಷೆಗೆ ಕುಳಿತುಕೊಳ್ಳಬೇಕು ಎಂದು ತಂದೆ ಸದಾ ಹೇಳುತ್ತಿದ್ದುದು ಎಲ್ಲರಿಗೂ ನೆನಪಾಗುತ್ತಿತ್ತು. ಕೊನೆಗೆ ಅರುಣಾ, ತಮ್ಮ ತಂದೆಯ ಕನಸುಗಳನ್ನು ಈಡೇರಿಸಲು ತನ್ನ ಯೋಜನೆಗಳನ್ನು ಬದಲಾಯಿಸಿದರು.

“ನನಗೆ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಕನಸು ಇರಲಿಲ್ಲ. ನಾನು ಕೇವಲ 10,000 ರಿಂದ 15,000 ರೂಪಾಯಿ ಗಳಿಸುವ ಸ್ವತಂತ್ರ ಮಹಿಳೆಯಾಗಲು ಬಯಸಿದ್ದೆ. ನನ್ನ ತಂದೆ ತನ್ನ ಹೆಣ್ಣು ಮಕ್ಕಳನ್ನು ಸ್ವತಂತ್ರರನ್ನಾಗಿ ಮಾಡುವುದನ್ನು ಸವಾಲಾಗಿ ತೆಗೆದುಕೊಂಡರು. ಆದರೆ ನನ್ನ ಇಂಜಿನಿಯರಿಂಗ್ ಸಮಯದಲ್ಲಿ, ನನಗೆ ಶಿಕ್ಷಣ ನೀಡಲು ಅವರು ಮಾಡಿದ ಸಾಲದಿಂದಾಗಿ ನಾನು ನನ್ನ ತಂದೆಯನ್ನು ಕಳೆದುಕೊಂಡೆ. ಅವರ ಮರಣದ ನಂತರ ಸಮಾಜಕ್ಕೆ ಮರಳಿ ಸೇವೆ ನೀಡಬೇಕೆಂದು ಅನಿಸಿತು. ನನ್ನ ದೇಶದ ರೈತರಿಗೆ ಸೇವೆ ಸಲ್ಲಿಸುವ ಮೂಲಕ ನನ್ನ ತಂದೆಯ ಕಳೆದುಹೋದ ನಗುವನ್ನು ಕಂಡುಕೊಳ್ಳಲು ನಾನು ಬಯಸುತ್ತೇನೆ, ”ಎಂದು ಅರುಣಾ ಹೇಳಿದರು.

ಐಎಎಸ್‌ ಆಸೆ ಈಡೇರಿಕೆಗಾಗಿ 2014ರಿಂದ ಕಷ್ಟಪಟ್ಟು ಓದಲು ಪ್ರಾರಂಭಿಸಿದರು. ಐದು ಬಾರಿ ಯುಪಿಎಸ್‌ಸಿಗೆ ಪ್ರಯತ್ನಿಸಿದರು, ಅರುಣಾ ಅವರು ತಮ್ಮ ಅಂತಿಮ ಪ್ರಯತ್ನದಲ್ಲಿ ಉತ್ತೀರ್ಣರಾಗುವ ನಿರೀಕ್ಷೆಯನ್ನು ಹೊಂದಿರಲಿಲ್ಲ. ವೈಫಲ್ಯಗಳ ಪರಿಣಾಮ ಹೆದರಿದ್ದರು. ಬೆಂಗಳೂರಿನಲ್ಲಿ ತಮ್ಮದೇ ಆದ ಯುಪಿಎಸ್‌ಸಿ ಕೋಚಿಂಗ್ ಇನ್‌ಸ್ಟಿಟ್ಯೂಟ್, ಅರುಣಾ ಅಕಾಡೆಮಿಯನ್ನು ಸ್ಥಾಪಿಸಿದರು, ಅಲ್ಲಿ ಅವರು ಯುಪಿಎಸ್‌ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಗ್ರಾಮೀಣ ಯುವಕರನ್ನು ಪ್ರೋತ್ಸಾಹಿಸುವ ಕೆಲಸ ಆರಂಭಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...