alex Certify ನವರಾತ್ರಿಯಲ್ಲಿ ಉಪವಾಸ: ನಿಮ್ಮ ಚೈತನ್ಯ ಹೆಚ್ಚಿಸುವ ತಿನಿಸುಗಳಿವು ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವರಾತ್ರಿಯಲ್ಲಿ ಉಪವಾಸ: ನಿಮ್ಮ ಚೈತನ್ಯ ಹೆಚ್ಚಿಸುವ ತಿನಿಸುಗಳಿವು !

Eat only when you are hungry for better health | Health News | Zee News

ನವರಾತ್ರಿ ಎಂದರೆ ನಾಡಿಗೆ ದೊಡ್ಡ ಹಬ್ಬ. 10 ದಿನಗಳವರೆಗಿನ ಸುದೀರ್ಘ ಆಚರಣೆಯಲ್ಲಿ ಕೆಲವರು ಬೊಂಬೆ ಕೂರಿಸುವುದುಂಟು, ಕೆಲವರು ದೀಪಾರಾಧನೆ ಮಾಡುವುದುಂಟು, ದೇವಿ ಪಾರಾಯಣ, ಪೂಜೆ, ಎಲ್ಲೆಡೆ ಅತ್ಯಂತ ಭಕ್ತಿ ಭಾವದ ಸಂಭ್ರಮ.

ನವರಾತ್ರಿಯಲ್ಲಿ 10 ದಿನ ಉಪವಾಸ ಮಾಡುವವರು ಇದ್ದಾರೆ. 10 ದಿನ ಉಪವಾಸ ಮಾಡುವುದು ಸುಲಭದ ಮಾತಲ್ಲ. ನಿರಾಹಾರ ಉಪವಾಸ ಮಾಡುವುದಕ್ಕಿಂತ ದೇಹದ ಪೋಷಣೆಗೂ ಸಹಕಾರಿಯಾಗುವಂತೆ, ಉಪವಾಸಕ್ಕೂ ಧಕ್ಕೆ ಆಗದಂತೆ ಕೆಲವು ಆಹಾರವನ್ನು ಸೇವಿಸಬಹುದು.

ನೆನೆಸಿದ ಕಡಲೆಬೀಜ ಪ್ರೊಟೀನ್ ಆಗರ. ಬಡವರ ಬಾದಾಮಿ ಎಂದೇ ಪ್ರಸಿದ್ದಿ. ನೆನೆಸಿದ ಕಡಲೇ ಕಾಯಿ ಮುಷ್ಟಿಯಷ್ಟು ತಿನ್ನುವುದರಿಂದ ಉಪವಾಸದ ಸಮಯದಲ್ಲಿ ಸಾಕಷ್ಟು ಚೈತನ್ಯ ದೊರಕುತ್ತದೆ.

ನೆನೆಸಿದ ಕಡಲೇಕಾಯಿ ತಿನ್ನುವುದರಿಂದ ಮತ್ತೂ ಒಂದು ಅನುಕೂಲ ಇದೆ. ಉಪವಾಸ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಾಡಬಹುದು. ನೆನೆಸಿದ ಕಡಲೇಕಾಯಿ ತಿನ್ನುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪರಿಹಾರ ಕೊಡುತ್ತದೆ.

ಇದರ ಜೊತೆಗೆ ಒಂದು ಬಾಳೆಹಣ್ಣು, ಒಂದು ಲೋಟ ಹಾಲು ಕುಡಿಯುವುದರಿಂದ ಉಪವಾಸಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ದೇಹವೂ ನಿತ್ರಾಣವಾಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...