alex Certify ʼFASTagʼ ಹಳೆಯದಾಗಿದ್ರೆ ಹೀಗೆ ಬದಲಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼFASTagʼ ಹಳೆಯದಾಗಿದ್ರೆ ಹೀಗೆ ಬದಲಿಸಿ

ವಾಹನಗಳಿಗೆ ಈಗ ಫಾಸ್ಟ್ ಟ್ಯಾಗ್ ಕಡ್ಡಾಯ. ಫಾಸ್ಟ್ಯಾಗ್ ಹಳೆಯದಾಗಿದ್ದರೆ ಅದನ್ನು ಸಮಯಕ್ಕೆ ಬದಲಾಯಿಸಬೇಕು.  ಹಳೆಯ ಫಾಸ್ಟ್ಯಾಗ್ ಇದ್ದರೆ, ಟೋಲ್ ನಲ್ಲಿ ಸಮಸ್ಯೆಯಾಗುತ್ತದೆ. ನೀವು ದಂಡ ಕಟ್ಟಬೇಕಾಗುತ್ತದೆ. ಹಾಗಾಗಿ ಮನೆಯಿಂದ ಹೊರಡುವ ಮೊದಲು ಫಾಸ್ಟ್ಯಾಗ್ ಸಿಂಧುತ್ವವನ್ನು ಪರೀಕ್ಷಿಸಿಕೊಳ್ಳಿ.

ರಸ್ತೆ ಸಾರಿಗೆ ಸಚಿವಾಲಯವು ಫಾಸ್ಟ್ ಟ್ಯಾಗ್‌ನ ಮಾನ್ಯತೆಯನ್ನು ನಿಗದಿಪಡಿಸಿದೆ. ಅದು ಮುಗಿದಿದ್ದರೆ ಟೋಲ್ ಪ್ಲಾಜಾದಲ್ಲಿ ಹೆಚ್ಚಿನ ಹಣ ಪಾವತಿ ಮಾಡಬೇಕಾಗುತ್ತದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ, ಫಾಸ್ಟ್ಯಾಗ್ ಮಾನ್ಯತೆಯನ್ನು ಐದು ವರ್ಷಗಳವರೆಗೆ ನಿಗಧಿಪಡಿಸಲಾಗಿದೆ.

ರಾಗಿ ಚೀಲದಲ್ಲಿ ಚಿನ್ನ ಇಟ್ಟು ಊರಿಗೆ ಹೋದ ಮಹಿಳೆ, ಆಮೇಲೇನಾಯ್ತು ಗೊತ್ತಾ…?

ಫಾಸ್ಟ್ಯಾಗ್ ನ್ನು ರಸ್ತೆ ಸಾರಿಗೆ ಸಚಿವಾಲಯವು ನವೆಂಬರ್‌ 2016 ರಿಂದ ಪ್ರಾರಂಭಿಸಿತು. ನವೆಂಬರ್‌ನಿಂದ ಹೊಸ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ. ನವೆಂಬರ್ 2016 ರಿಂದ ಶೋರೂಮ್‌ನಿಂದ ಮಾರಾಟವಾಗುವ ಪ್ರತಿಯೊಂದು ವಾಹನಕ್ಕೂ, ಕಂಪನಿಯು ಫಾಸ್ಟ್ ಟ್ಯಾಗ್ ನೀಡುತ್ತದೆ.

ನವೆಂಬರ್ 2016 ರಲ್ಲಿ ವಾಹನವನ್ನು ಖರೀದಿಸಿದ್ದರೆ, ಎರಡು ದಿನಗಳ ನಂತರ ವಾಹನಕ್ಕೆ ಫಾಸ್ಟ್ಯಾಗ್ ಅಳವಡಿಸಲಾಗುತ್ತದೆ. ಈಗ ಅದು ಹಳೆಯದಾಗಿರುತ್ತದೆ. ಹಾಗಾಗಿ ಅದನ್ನು ಬದಲಿಸಬೇಕು.

ಗ್ರಾಹಕರ ಕುಂದುಕೊರತೆ ಆಲಿಸಲು SBI ನಿಂದ ಹೊಸ ಸಹಾಯವಾಣಿ

ವಾಹನಗಳಿಗೆ ಅಳವಡಿಸಲಾಗಿರುವ ಐದು ವರ್ಷ ಹಳೆಯದಾದ ಫಾಸ್ಟ್ಯಾಗ್ ಅನ್ನು ತೆಗೆದುಹಾಕಿ, ಹೊಸದನ್ನು ತೆಗೆದುಕೊಳ್ಳಬಹುದು. ಫಾಸ್ಟ್ಯಾಗ್, ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದ್ದರೆ ಅಥವಾ ಫಾಸ್ಟ್ಯಾಗ್ ನಲ್ಲಿ ಹಣವಿದ್ದರೆ ಸಂಬಂಧಪಟ್ಟ ಬ್ಯಾಂಕ್‌ಗೆ ಹೋಗಬೇಕು. ಅಲ್ಲಿ ಇನ್ನೊಂದು ಫಾಸ್ಟ್ಯಾಗ್ ತೆಗೆದುಕೊಳ್ಳಬೇಕು. ಹಳೆಯ ಫಾಸ್ಟ್ ಟ್ಯಾಗ್‌ನಲ್ಲಿ ಉಳಿದಿರುವ ಹಣವನ್ನು ಹೊಸ ಫಾಸ್ಟ್ ಟ್ಯಾಗ್‌ಗೆ ವರ್ಗಾಯಿಸಬೇಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...