ಶಾರುಖ್ ಖಾನ್, ಮಾಧುರಿ ದೀಕ್ಷಿತ್ ನಟನೆಯ ʼದಿಲ್ ತೋ ಪಾಗಲ್ ಹೈʼ ಹಿಂದಿ ಸಿನಿಮಾದ ‘ಭೋಲಿ ಸಿ ಸೂರತ್, ಆಂಖೋ ಮೇ ಮಸ್ತಿ’ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ. ಇವತ್ತಿನ ಯುವಕರ ಪ್ರಣಯಕ್ಕೂ ಇದೇ ಹಾಡು ಸ್ಫೂರ್ತಿ.
ಪ್ರೀತಿಗೆ ಒಪ್ಪದ ಯುವತಿ, ಪಾಗಲ್ ಪ್ರೇಮಿಯಿಂದ ಘೋರ ಕೃತ್ಯ
ಮುದ್ದು ಮುಖದ, ತುಂಟಾಟದ ಕಣ್ಣುಗಳ ಹರೆಯದ ಜೋಡಿಯ ನಡುವಿನ ಗುಣಗಾನ ಇದು. ಆದರೆ ಈ ಹಾಡನ್ನು ಬೈಕ್ ಕಳ್ಳನೊಬ್ಬನಿಗೆ ಜೋಡಿಸಿದ್ದಾರೆ ಫರೀದಾಬಾದ್ ಪೊಲೀಸರು.
ಜನರಿಗೆ ಬೈಕ್ ಕಳ್ಳನ ಫೋಟೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿ ಎಚ್ಚರಿಸಿರುವ ಅವರು, ‘ಮುದ್ದು ಮುಖ, ಆದರೆ ಕೆಲಸವೇ ಕಳ್ಳತನ, ನಿಮ್ಮ ಬೈಕು ಹುಷಾರು..ಹಾಯ್ ಹಾಯೇ,’ ಎಂದು ಪೋಸ್ಟ್ ಮಾಡಿದ್ದಾರೆ. ಜನರ ಗಮನ ಸೆಳೆಯುವ ಈ ಪೋಸ್ಟ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.