alex Certify BIG NEWS: ‘ಒಂಟೆ ಜ್ವರ’ ದ ಸೋಂಕಿಗೆ ದಾರಿ ಮಾಡಿಕೊಡಲಿದೆ ಫಿಫಾ ವಿಶ್ವ ಕಪ್…​! ವಿಜ್ಞಾನಿಗಳ ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಒಂಟೆ ಜ್ವರ’ ದ ಸೋಂಕಿಗೆ ದಾರಿ ಮಾಡಿಕೊಡಲಿದೆ ಫಿಫಾ ವಿಶ್ವ ಕಪ್…​! ವಿಜ್ಞಾನಿಗಳ ಆತಂಕ

ಪ್ರಪಂಚದಾದ್ಯಂತದ ಸುಮಾರು 1.2 ಮಿಲಿಯನ್ ಜನರು ಚತುರ್ವಾರ್ಷಿಕ ಫುಟ್‌ಬಾಲ್ ಈವೆಂಟ್ ವೀಕ್ಷಿಸಲು ಕತಾರ್‌ಗೆ ಭೇಟಿ ನೀಡುತ್ತಿದ್ದಾರೆ. ಇದು ಕೋವಿಡ್​-19 ಸಾಂಕ್ರಾಮಿಕದ ನಂತರದ ಅತಿದೊಡ್ಡ ಅಂತಾರಾಷ್ಟ್ರೀಯ ಘಟನೆಗಳಲ್ಲಿ ಒಂದಾಗಿದೆ.

ನ್ಯೂ ಮೈಕ್ರೊಬ್ಸ್ ಮತ್ತು ನ್ಯೂ ಇನ್ಫೆಕ್ಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈ ಫಿಫಾ ವಿಶ್ವಕಪ್ ಅನ್ನು ವೀಕ್ಷಿಸಲು ಈ ಪರಿಯ ಜನರು ಸೇರುತ್ತಿರುವುದರಿಂದ ಕೋವಿಡ್​ ಸೋಂಕಿನ ಇನ್ನೊಂದು ಭಾಗವಾಗಿರುವ ಒಂಟೆ ಜ್ವರದಿಂದ (ಕ್ಯಾಮೆಲ್​ ಫ್ಲೂ) ಬಳಲುವ ಅಪಾಯ ಉಂಟಾಗುವ ಭೀತಿ ಇದೆ. ಈ ಬಗ್ಗೆ ವಿಜ್ಞಾನಿಗಳು ಆತಂಕಗೊಂಡಿದ್ದಾರೆ.

ಕೋವಿಡ್​ ಇನ್ನೂ ಸಂಪೂರ್ಣ ತೊಲಗದ ನಡುವೆಯೇ ಕ್ಯಾಮೆಲ್​ ಫ್ಲೂ ಒಕ್ಕರಿಸಿದೆ. ಇದು ಮಾತ್ರವಲ್ಲದೇ ಅಧ್ಯಯನದ ಪ್ರಕಾರ, ವೆಕ್ಟರ್-ಹರಡುವ ರೋಗಗಳಾದ ಚರ್ಮದ ಲೀಶ್ಮೇನಿಯಾಸಿಸ್, ಮಲೇರಿಯಾ, ಡೆಂಗ್ಯೂ, ರೇಬೀಸ್, ದಡಾರ, ಹೆಪಟೈಟಿಸ್ ಎ ಮತ್ತು ಬಿ ಮತ್ತು ಪ್ರಯಾಣಿಕರ ಅತಿಸಾರದ ಕೂಡ ಅಪಾಯವಿದೆ ಎನ್ನಲಾಗಿದೆ.

ಕತಾರ್ ತನ್ನ ಆರೋಗ್ಯ ಕ್ಷೇತ್ರವನ್ನು ಸಾಕಷ್ಟು ಸಿದ್ಧಗೊಳಿಸಿದ್ದರೂ, ಸೋಂಕುಗಳ ಹರಡುವಿಕೆಯ ಅಪಾಯದ ಕುರಿತು ತಳ್ಳಿಹಾಕುವಂತಿಲ್ಲ. ಈ ಬಗ್ಗೆ ಹೆಚ್ಚಿನ ಎಚ್ಚರಿಕೆಯ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...