alex Certify ಸತ್ತ ಮೇಲೂ ಅಂಗಾಂಗ ದಾನದ ಮೂಲಕ ಹಲವರ ಜೀವ ಉಳಿಸಿದ 18 ತಿಂಗಳ ಪುಟಾಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತ್ತ ಮೇಲೂ ಅಂಗಾಂಗ ದಾನದ ಮೂಲಕ ಹಲವರ ಜೀವ ಉಳಿಸಿದ 18 ತಿಂಗಳ ಪುಟಾಣಿ

ಮೇವಾತ್​ (ಹರಿಯಾಣ): ಇಲ್ಲಿನ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಬ್ರೈನ್ ಡೆಡ್ ಎಂದು ಘೋಷಿಸಲ್ಪಟ್ಟ 18 ತಿಂಗಳ ಬಾಲಕಿಯ ಕುಟುಂಬವು ಆಕೆಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಇಬ್ಬರು ರೋಗಿಗಳಿಗೆ ಹೊಸ ಜೀವವನ್ನು ನೀಡಿದೆ.

ಹರಿಯಾಣದ ಮೇವಾತ್ ಮೂಲದ ಮಹಿರಾ ನವೆಂಬರ್ 6 ರಂದು ತನ್ನ ಮನೆಯ ಬಾಲ್ಕನಿಯಿಂದ ಬಿದ್ದು, ತೀವ್ರ ಮೆದುಳಿಗೆ ಹಾನಿಗೆ ಒಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಏಮ್ಸ್​ಗೆ ದಾಖಲಾಗಿದ್ದಳು. ಆಕೆ ಅಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಮಗಳ ಸಾವಿನ ದುಃಖದ ನಡುವೆಯೂ ಇನ್ನೊಬ್ಬರ ಜೀವಕ್ಕೆ ಆಸರೆಯಾಗಲಿ ಎಂದು ಕುಟುಂಬಸ್ಥರು ಆಕೆಯ ಅಂಗದಾನಕ್ಕೆ ಮುಂದಾದರು.

ಬಾಲಕಿಯ ಯಕೃತ್ತನ್ನು ಇನ್‌ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್‌ನಲ್ಲಿ (ಐಎಲ್‌ಬಿಎಸ್) ಆರು ತಿಂಗಳ ಮಗುವಿಗೆ ನೀಡಲಾಯಿತು. ಮೂತ್ರಪಿಂಡಗಳನ್ನು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ 17 ವರ್ಷದ ಹುಡುಗನಿಗೆ ಕಸಿ ಮಾಡಲಾಯಿತು. ಬಾಲಕಿಯ ಕಾರ್ನಿಯಾಗಳು ಮತ್ತು ಹೃದಯ ಕವಾಟಗಳನ್ನು ಸಂರಕ್ಷಿಸಿ ಇಡಲಾಗಿದೆ.

ಬಾಲಕಿ ಮೃತಪಟ್ಟ ಬಳಿಕ ಆಕೆಯ ಪಾಲಕರಿಗೆ ವೈದ್ಯರು ಕೌನ್ಸೆಲಿಂಗ್​ ಮಾಡುವ ಮೂಲಕ ಹೇಗೆ ಅಂಗಾಂಗದಾನಕ್ಕೆ ಸಜ್ಜಾಗಬೇಕು ಎಂದು ತಿಳಿಸಿದರು. ನಂತರ ತಮ್ಮ ಮಗು ಸತ್ತ ಮೇಲೆಯೂ ಸಾರ್ಥಕತೆ ಮೆರೆಯುವುದರ ಬಗ್ಗೆ ಅರಿತ ಆಕೆಯ ಪಾಲಕರು ಅದನ್ನು ಒಪ್ಪಿ ಹಲವು ಜೀವಕ್ಕೆ ಆಸರೆಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...