ನಟಿ ಆಲಿಯಾ ಭಟ್ ಹಾಗೂ ನಟ ರಣಬೀರ್ ಕಪೂರ್ ಬಾಲಿವುಡ್ನ ಹಾಟ್ ಫೇವರೇಟ್ ಜೋಡಿ. ಇವರಿಬ್ಬರೂ ಜಸ್ಟ್ ಎರಡುವರೆ ತಿಂಗಳ ಹಿಂದಷ್ಟೆ ಸತಿ-ಪತಿಗಳಾಗಿ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದರು. ಈಗ ಇದೇ ಜೋಡಿ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಅಪ್ಪ-ಅಮ್ಮ ಆಗುತ್ತಿದ್ದಾರೆ ಅನ್ನೋ ಸುದ್ದಿ ಅದು.
ಸೋಶಿಯಲ್ ಮೀಡಿಯಾದಲ್ಲಿ ಖುದ್ದು ಆಲಿಯಾ ಭಟ್ ಈ ನ್ಯೂಸ್ ನ್ನ ಪಬ್ಲಿಕ್ ಮಾಡಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಕೆಲ ಕಿಡಿಗೇಡಿಗಳು, ಆಲಿಯಾಭಟ್ ಗರ್ಭಧಾರಣೆಗೂ ಹಾಗೂ ಸುಶಾಂತ್ ಸಿಂಗ್ ರಜಪೂತ್ ಅವರ ಪುನರ್ಜನ್ಮದೊಂದಿಗೆ ಲಿಂಕ್ ಮಾಡಿದ್ದಾರೆ. ಇದಕ್ಕಾಗಿ ಜೀ ನ್ಯೂಸ್ ಅನ್ನೋ ಖಾಸಗಿ ಸುದ್ದಿವಾಹಿನಿಯ ಹೆಸರನ್ನ ಬಳಸಿಕೊಳ್ಳಲಾಗಿದೆ. ಜೀ ನ್ಯೂಸ್ ಹೆಸರನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುವ ಫೋಟೋದಲ್ಲಿ ಆಲಿಯಾಭಟ್ ಮಗುವಿನ ರೂಪದಲ್ಲಿ ಸುಶಾಂತ್ ಪುನರ್ಜನ್ಮ ಎಂದು ಬರೆಯಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸ್ಕ್ರೀನ್ಶಾಟ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಫೋಟೋ ಮತ್ತು ಜೀ ನ್ಯೂಸ್ ಲೋಗೋ ಇದೆ. ಆದರೆ Zee News ಗೂ ಈ ಸ್ಕ್ರೀನ್ಶಾಟ್ಗೂ ಯಾವುದೇ ಸಂಬಂಧವಿಲ್ಲ ಅಂತ ಕ್ಲಿಯರ್ಕಟ್ ಆಗಿ ಹೇಳಿದೆ. ಜೀ ನ್ಯೂಸ್ ಅಂತಹ ಯಾವುದೇ ಕಾರ್ಯಕ್ರಮವನ್ನು ಪ್ರಸಾರ ಮಾಡಿಲ್ಲ. ಇದು ಸಂಪೂರ್ಣ ನಕಲಿ ಸ್ಕ್ರೀನ್ಶಾಟ್ ಆಗಿದ್ದು. ಯಾವುದೋ ದುರುದ್ದೇಶದಿಂದ ಫೋಟೋಶಾಪ್ ಮಾಡಿ ಈ ಸುದ್ದಿ ಮಾಡಲಾಗಿದೆ ಎಂದು ಅಂದಾಜು ಮಾಡಲಾಗಿದೆ.
ಈ ನಕಲಿ ಸ್ಕ್ರೀನ್ಶಾಟ್ನಲ್ಲಿ ಜೀ ನ್ಯೂಸ್ ನ ಯಾವ ಕಾರ್ಯಕ್ರಮದ ಫೋಟೋ ಬಳಸಲಾಗಿದೆಯೋ ಆ ಶೋವನ್ನು ಬಹಳ ಹಿಂದೆಯೇ ನಿಲ್ಲಿಸಲಾಗಿದೆ. ಇದೊಂದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು, ಜೀ ನ್ಯೂಸ್ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಕಿಡಿಗೇಡಿಗಳ ಈ ಕೃತ್ಯದಿಂದ ಜೀ ನ್ಯೂಸ್ ಮುಜುಗರ ಪಡುವ ಹಾಗಾಗಿದೆ. ಇನ್ನು ಅಪ್ಪ-ಅಮ್ಮ ಆಗುವ ಖುಷಿಯಲ್ಲಿರುವ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಈ ಫೇಕ್ ನ್ಯೂಸ್ ಬಗ್ಗೆ ತಲೆಯೇ ಕೆಡಿಸಿಕೊಳ್ತಿಲ್ಲ.